ಮಲೆನಾಡಲ್ಲಿ ನಿಲ್ಲದ ಕಾಡಾನೆ ಹಾವಳಿ: ಬೀಡುಬಿಟ್ಟ ಭೀಟಮ್ಮ, ಭುವನೇಶ್ವರಿ ತಂಡದ 15ಕ್ಕೂ ಹೆಚ್ಚು ಕಾಡಾನೆಗಳು

ಚಿಕ್ಕಮಗಳೂರು: ಮಲೆನಾಡಲ್ಲಿ ಕಾಡಾನೆ ಹಾವಳಿ ನಿರಂತರವಾಗಿದ್ದು, ಇದರಿಂದಾಗಿ ಗ್ರಾಮದಂಚಿನ ಅರಣ್ಯ ಪ್ರದೇಶದ ಜನರು ಕಂಗೆಟ್ಟಿದ್ದಾರೆ. ಭೀಟಮ್ಮ, ಭುವನೇಶ್ವರಿ ತಂಡದ 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಈ ಪ್ರದೇಶದಲ್ಲಿ ಬೀಡುಬಿಟ್ಟಿವೆ.
ಮೂಡಿಗೆರೆ ತಾಲೂಕಿನ ಮುಡುಸಸಿ, ಕನ್ನಾಪುರ ಗ್ರಾಮದಂಚಿನ ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿವೆ. ನಿರಂತರ ಕಾಡಾನೆ ದಾಳಿಯ ಆತಂಕದಲ್ಲಿರುವ ಮಲೆನಾಡಿಗರು ಹೈರಾಣಾಗಿದ್ದಾರೆ.
ಕಾಡಾನೆಗಳ ದಾಳಿಯ ಭೀತಿಯಿಂದ ರೈತರು ಹೊಲ—ಗದ್ದೆ–ತೋಟಗಳಿಗೆ ಹೋಗೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಮಲೆನಾಡಲ್ಲಿ ಸಮೃದ್ಧ ಮಳೆಯಾಗಿದ್ದರೂ ರೈತರು ಕೃಷಿ ಕೆಲಸಕ್ಕೆ ಹೊಲಕ್ಕೆ ಹೋಗಲು ಭಯಪಡುವಂತಾಗಿದೆ.
ಕಳೆದೊಂದು ತಿಂಗಳಿಂದ ಮಲೆನಾಡಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿವೆ. 15 ಆನೆಗಳು 2 ತಂಡವಾಗಿ ಮಲೆನಾಡಲ್ಲಿ ದಾಂಧಲೆ ಮಾಡುತ್ತಿದ್ದು, ಕಾಡಾನೆಯ ದಾಳಿಗೆ ಪರಿಹಾರವೇ ಇಲ್ಲ ಎನ್ನುವಂತಾಗಿದೆ.
ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾವುದೇ ಫಲ ನೀಡಿಲ್ಲ. ಆನೆಗಳನ್ನ ಶಾಶ್ಚತವಾಗಿ ಕಾಡಿಗಟ್ಟುವಂತೆ ಸ್ಥಳೀಯರ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD