6:29 PM Saturday 18 - October 2025

ರೇಬಿಸ್ ನಿಂದ ಬಳಲುತ್ತಿದ್ದ ಯುವತಿ ದಾರುಣ ಸಾವು!

rabies
01/07/2022

ಪಾಲಕ್ಕಾಡ್:  ನಾಯಿ ಕಚ್ಚಿದ ಪರಿಣಾಮ ರೇಬಿಸ್ ನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವ ದಾರುಣ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

ಪಾಲಕ್ಕಾಡ್ ಮೂಲದ ಸುಗುನನ್ ಮತ್ತು ಸಿಂಧು ದಂಪತಿಯ ಪುತ್ರಿ. 19 ವರ್ಷ ವಯಸ್ಸಿನ ಶ್ರೀಲಕ್ಷ್ಮೀ  ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.

ಮೇ 30ರಂದು ಘಟನೆ ನಡೆದಿತ್ತು. ಕಾಲೇಜಿಗೆ ಹೋಗುತ್ತಿದ್ದ ವೇಳೆ ಅವರ ಪಕ್ಕದ ಮನೆಯ ನಾಯಿ ಕಚ್ಚಿತ್ತು.  ನಾಯಿ ಕಚ್ಚಿದ ಕಾರಣ ಯುವತಿ ಲಸಿಕೆ ಕೂಡ ಹಾಕಿಸಿಕೊಂಡಿದ್ದಳು.  ಆ ಬಳಿಕವೂ ಯುವತಿ ಆರೋಗ್ಯವಂತಳಾಗಿದ್ದಳು. ಇತ್ತೀಚೆಗೆ ಆಕೆಗೆ ಜ್ವರ ಕಾಣಿಸಿಕೊಂಡಿದ್ದು, ಪರೀಕ್ಷೆ ನಡೆಸಿದ ವೇಳೆ ರೇಬಿಸ್ ಲಕ್ಷಣಗಳು ಕಂಡು ಬಂದಿತ್ತು.

ತಕ್ಷಣ ಆಕೆಯನ್ನು ತ್ರಿಸ್ಸೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರಿಯಕರ ಜೊತೆ ಓಡಿ ಹೋದ ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಕೊಂದ ಪಾಪಿ

ನಾನು ಅಪ್ಪು ಸರ್ ಅವರ 5 ಪರ್ಸೆಂಟ್ ನಷ್ಟೂ ಇಲ್ಲ: ತಮಿಳು ಯುವನಟ ಆರ್ಯ

ಭಾರೀ ಮಳೆ ಹಿನ್ನೆಲೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರಿನಲ್ಲಿ ಕೃತಕ ನೆರೆ: ಶಾಲಾ ವಾಹನ ಚಾಲಕರ ಪಾಡು ಹೇಳತೀರದು!

ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ಜಾಸ್ತಿಯಾಯ್ತೆಂದು ಮಹಿಳೆಯ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿ

Exit mobile version