4:29 AM Thursday 16 - October 2025

ನಾಲ್ವರು ಭಾರತೀಯರ ಸಹಿತ 22 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನ ನಾಪತ್ತೆ!

nepala
29/05/2022

ನೇಪಾಳದ ಪೊಖರಾದಿಂದ ಜೋಮ್ಸೋಮ್‌ ಗೆ ಹಾರಿದ ವಿಮಾನದ ವಿವರಗಳು ಒಂದು ಗಂಟೆ ಕಳೆದರೂ,  ಯಾವುದೇ ಮಾಹಿತಿ ಲಭ್ಯವಾಗಿಲ್ಲ.  22 ಜನರಿದ್ದ ವಿಮಾನ ನಾಪತ್ತೆಯಾಗಿದ್ದು, ಇದರಲ್ಲಿ ನಾಲ್ವರು ಭಾರತೀಯರು ಇದ್ದರು ಎಂದು ತಿಳಿದು ಬಂದಿದೆ.

ಗಂಟೆಗಟ್ಟಲೆ ವಿಮಾನದ ಸಂಪರ್ಕ ಕಳೆದುಕೊಂಡಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.  ತಾರಾ ಏರ್‌ ನ 9 NAET ವಿಮಾನವು 9.55 ಕ್ಕೆ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ವಿಮಾನವು ರಾಡಾರ್‌ ನಿಂದ ಕಣ್ಮರೆಯಾಯಿತು.  ನಾಪತ್ತೆಯಾಗಿರುವ ವಿಮಾನದಲ್ಲಿ ನಾಲ್ವರು ಭಾರತೀಯರು ಹಾಗೂ ಮೂವರು ಜಪಾನ್ ಪ್ರಜೆಗಳಿದ್ದು, ಉಳಿದವರು ನೇಪಾಳ ಮೂಲದವರಾಗಿದ್ದಾರೆ.

ಗೃಹ ಸಚಿವಾಲಯವು ಮಸ್ತಾಂಗ್ ಮತ್ತು ಪೊಖರಾದಿಂದ ಎರಡು ಖಾಸಗಿ ಹೆಲಿಕಾಪ್ಟರ್‌ ಗಳನ್ನು ವಿಮಾನದ ಪತ್ತೆಗೆ ನಿಯೋಜಿಸಿದೆ.  ನೇಪಾಳ ಸೇನೆ ಕೂಡ ಶೋಧ ಕಾರ್ಯಕ್ಕೆ ಹೆಲಿಕಾಪ್ಟರ್ ನಿಯೋಜಿಸಲು ಸಿದ್ಧತೆ ನಡೆಸಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

19 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವವಿವಾಹಿತೆ ಸಾವು: ವೈದ್ಯರ ನಿರ್ಲಕ್ಷ್ಯದ ಆರೋಪ

ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕ ಮೂಲದ ಒಂದೇ ಕುಟುಂಬದ 7 ಮಂದಿ ಅಪಘಾತಕ್ಕೆ ಬಲಿ

]ಕಾಂಗ್ರೆಸ್ ಪಕ್ಷ ತೊರೆದ ನಟ ಮುಖ್ಯಮಂತ್ರಿ ಚಂದ್ರು: ಕಾರಣ ಏನು?

ಮಹಿಳೆಯರು ರಾತ್ರಿ ಪಾಳಿಯಲ್ಲಿ  ಕೆಲಸ ಮಾಡುವಂತಿಲ್ಲ: ಯೋಗಿ ಸರ್ಕಾರದಿಂದ ಖಡಕ್ ಆದೇಶ

ಇತ್ತೀಚಿನ ಸುದ್ದಿ

Exit mobile version