6:07 AM Thursday 16 - October 2025

ಮೂರು ತಲೆಯ ಮಗುವಿಗೆ ಜನ್ಮ ನೀಡಿದ ತಾಯಿ!

3 head baby
13/07/2021

ಮೈನ್ಪುರಿ:  ಮಹಿಳೆಯೊಬ್ಬರು 3 ತಲೆಯನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ನಡೆದಿದ್ದು, ವೈದ್ಯ ಲೋಕಕ್ಕೆ ಇದೀಗ ಈ ಮಗು ಹೊಸ ಸವಾಲಾಗಿದೆ.

ಮೈನ್ಪುರಿ ಜಿಲ್ಲೆಯ ಕಿಶಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಲಾರಿಯಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಧರ್ಮೇಂದ್ರ –ರಾಗಿಣಿ ದಂಪತಿಗೆ ಈ ಮಗು ಜನಿಸಿದೆ. ನಿನ್ನೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ರಾಗಿಣಿ  ಅವರು, ಮೂರು ತಲೆಯ ಮಗುವಿಗೆ ಜನ್ಮ ನೀಡಿದ್ದಾರೆ.

ಸದ್ಯ ತಾಯಿ ಮಗುವಿನ ಆರೋಗ್ಯ ಚೆನ್ನಾಗಿದೆ.  ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮೂರು ತಲೆಯ ಮಗು ಜನಿಸಿದೆ ಎನ್ನುವ ಮಾಹಿತಿ ಕೇಳುತ್ತಿದ್ದಂತೆಯೇ ಇಡೀ ಊರಿನ ಜನರು ಮಗುವನ್ನು ನೋಡಲು ಗುಂಪುಗುಂಪಾಗಿ ದಂಪತಿಯ ಮನೆಗೆ ಬಂದಿದ್ದಾರೆ.

ಇನ್ನೂ ಹರ್ಮೋನ್ ಗಳ ವ್ಯತ್ಯಾಸದಿಂದಾಗಿ ಈ ರೀತಿಯಲ್ಲಿ ಮಕ್ಕಳು ಜನಿಸುವುದು ಸಹಜವಾಗಿದೆ. ಆದರೆ ಇದೀಗ ಮಗುವನ್ನು ಗ್ರಾಮಸ್ಥರು ಇದೊಂದು ದೇವರ ಅವತಾರ ಎಂದೇ ತಿಳಿದಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version