ವಿಶ್ವಸಂಸ್ಥೆ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಭಾರೀ ಅವಮಾನ!

ವಿಶ್ವಸಂಸ್ಥೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಗೆ ಭೇಟಿ ನೀಡಿದ ವೇಳೆ ಅವರಿಗೆ ಹಲವು ರೀತಿಯಲ್ಲಿ ಮುಜುಗರ ಸೃಷ್ಟಿಯಾಗಿರುವ ಘಟನೆ ನಡೆಯಿತು.
ಸಭಾಂಗಣಕ್ಕೆ ಪತ್ನಿ ಮೆಲೀನಾ ಜೊತೆಗೆ ಆಗಮಿಸುತ್ತಿದ್ದ ವೇಳೆ ಎಸ್ಕಲೇಟರ್ ಕೆಟ್ಟು ನಿಂತಿತು. ಹೀಗಾಗಿ ಟ್ರಂಪ್ ಮತ್ತು ಪತ್ನಿ ಮೆಲೀನಾ ಎಸ್ಕಲೇಟರ್ ಮೇಲೆ ನಡೆದುಕೊಂಡು ಹೋದರು. ಇದಾದ ನಂತರ ಸಭಾಂಗಣದಲ್ಲಿ ಟ್ರಂಪ್ ಮಾತನಾಡುತ್ತಿದ್ದ ವೇಳೆ ಟೆಲಿಪ್ರಾಂಪ್ಟರ್ ಕೂಡ ಕೆಟ್ಟು ಹೋಯಿತು. ಇನ್ನೊಂದೆಡೆ ಧ್ವನಿ ವ್ಯವಸ್ಥೆಯೂ ಸರಿಯಾಗಿ ಕಾರ್ಯ ನಿರ್ವಹಿಸಲಿಲ್ಲ.
ಇನ್ನೂ ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ ಅದರ ಸಹಾಯವಿಲ್ಲದೆಯೇ ತಾನು ಭಾಷಣ ಮಾಡುತ್ತೇನೆ ಎಂದು ಟ್ರಂಪ್ ಉಲ್ಲೇಖಿಸಿದರು. ಅಲ್ಲದೇ ಸೌಂಡ್ ಸಿಸ್ಟಮ್ ಕೈಕೊಟ್ಟ ಪರಿಣಾಮ ಟ್ರಂಪ್ ಅವರ ಧ್ವನಿ ಕೂಡ ಸರಿಯಾಗಿ ಕೇಳಿಸಲಿಲ್ಲ. ಇದು ಒಳ ಸಂಚು ಅಂತಾ ಟ್ರಂಪ್ ಆಪಾದಿಸಿದ್ದಾರೆ.
ಟ್ರಂಪ್ ಘಟನೆ ಸಂಬಂಧ ತಮ್ಮ ಟ್ರುಥ್ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಸ್ಕಲೇಟರ್ ಆಫ್ ಮಾಡುವ ಪ್ರಹಸನವನ್ನು ವಿಶ್ವಸಂಸ್ಥೆ ಸಿಬ್ಬಂದಿ ಮಾಡಿದ್ದಾರೆ. ಇನ್ನೂ ಸಭೆಯ ಮುಂಭಾಗದಲ್ಲಿ ಆಸೀನರಾಗಿದ್ದ ಅಮೆರಿಕದ ಪ್ರಥಮ ಮಹಿಳೆ ಮೆಲೀನಾ ಅವರಿಗೂ ಒಂದು ಶಬ್ಧವೂ ಕೇಳಿಸಲಿಲ್ಲ ಎಂದು ಸೌಂಡ್ ಸಿಸ್ಟಮ್ ಬಗ್ಗೆ ಅಣಕವಾಡಿದರು. ಮೂರು ಘಟನೆಗಳನ್ನೂ ತ್ರಿವಳಿ ಒಳಸಂಚು ಅಂತ ಹೇಳಿದ ಟ್ರಂಪ್, ನಾಚಿಕೆಯಾಗಬೇಕು ಎಂದು ಕಿಡಿಕಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD