ಭಾರತದ ಮೇಲೆ 300—400 ಡ್ರೋನ್ ಪ್ರಯೋಗಿಸಿದ್ದ ಪಾಕಿಸ್ತಾನ: ಡ್ರೋನ್ ಬಳಕೆಯ ಉದ್ದೇಶ ಏನಾಗಿತ್ತು?

ನವದೆಹಲಿ: ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ ಮತ್ತು ಪಂಜಾಬ್ ನಾದ್ಯಂತ ಶ್ರೀನಗರದಿಂದ ಜೈಸಲ್ಮೇರ್ ಮತ್ತು ಪಠಾಣ್ ಕೋಟ್ ವರೆಗಿನ 36 ಪಟ್ಟಣಗಳು ಅಥವಾ ನಗರಗಳಲ್ಲಿ ಅಥವಾ ಹತ್ತಿರದ ಭಾರತೀಯ ಮಿಲಿಟರಿ ಸ್ಥಾಪನೆಗಳ ಮೇಲೆ ತಡರಾತ್ರಿ ಪಾಕಿಸ್ತಾನ ಡ್ರೋನ್ ದಾಳಿಗೆ ವಿಫಲ ಯತ್ನ ನಡೆಸಿತ್ತು. ಈ ದಾಳಿಯ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ 300 ರಿಂದ 400 ಟರ್ಕಿಶ್ ಡ್ರೋನ್‌ಗಳನ್ನು ಹಾರಿಸಿದೆ ಎಂದು ತಿಳಿಸಿದರು.
ಲಡಾಖ್ ನ ಸಿಯಾಚಿನ್ ಹಿಮನದಿ ಬೇಸ್ ಕ್ಯಾಂಪ್ ಮತ್ತು ಗುಜರಾತ್ ನ ಕಚ್ ಪ್ರದೇಶದಲ್ಲಿ ಸಹ ಪಾಕ್ ಡ್ರೋನ್ ಗಳು ಕಂಡುಬಂದವು. ಈ ಎರಡೂ ಪ್ರದೇಶಗಳು ಸುಮಾರು 1,400 ಕಿಮೀ ದೂರದಲ್ಲಿವೆ. ಇದು ದಾಳಿಯ ವ್ಯಾಪಕ ಹರಡುವಿಕೆಯನ್ನು ಒತ್ತಿ ಹೇಳಿದೆ ಎಂದು ಅವರು ತಿಳಿಸಿದರು.
ವಾಯು ರಕ್ಷಣಾ ಬಂದೂಕುಗಳಿಂದ ಐವತ್ತು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. 20 ಡ್ರೋನ್‌ಗಳನ್ನು ರೇಡಿಯೋ ಆವರ್ತನಗಳನ್ನು ಜ್ಯಾಮಿಂಗ್ ಮಾಡುವ ಮೂಲಕ ತಟಸ್ಥಗೊಳಿಸಲಾಯಿತು. ಪಾಕಿಸ್ತಾನ ಪ್ರಯೋಗಿಸಿದ ಹೆಚ್ಚಿನ ಡ್ರೋನ್ ಗಳು ನಿರಾಯುಧವಾಗಿದ್ದವು, ಇದು ಪಾಕ್ ಭಾರತದ ರಕ್ಷಣಾ ಪಡೆಗಳನ್ನು ಪರೀಕ್ಷಿಸಿರಬಹುದು ಎನ್ನುವುದನ್ನು ಸೂಚಿಸುತ್ತದೆ. ಡ್ರೋನ್ ಕ್ಯಾಮರಾ ದೃಶ್ಯಗಳು ಪಾಕಿಸ್ತಾನಕ್ಕೆ ಇಲ್ಲಿನ ದೃಶ್ಯವನ್ನು ಪ್ರಸಾರ ಮಾಡಿರಬಹುದು ಎಂದು ಅವರು ತಿಳಿಸಿದರು.
ಪಾಕಿಸ್ತಾನದ ಈ ನಡೆ ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕರ್ನಲ್ ಖುರೇಷಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ಅಥವಾ ಎಲ್ ಒಸಿಯಲ್ಲಿ ನಿರಂತರ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ಮತ್ತು ಫಿರಂಗಿ ಶೆಲ್ ದಾಳಿ ನಡೆದಿವೆ. ಇದರಿಂದಾಗಿ ಒಬ್ಬ ಸೈನಿಕ ಹುತಾತ್ಮರಾಗಿದ್ದು, 16 ಭಾರತೀಯರು ಬಲಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ತನ್ನ ಪ್ರತಿಸ್ಪರ್ಧಿಯ ಮೇಲೆ ‘ಭಾರೀ ಹಾನಿ’ ಉಂಟುಮಾಡಿದೆ ಎಂದು ಕರ್ನಲ್ ಖುರೇಷಿ ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD