10:11 AM Tuesday 9 - September 2025

ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಶೇ.50ರಷ್ಟು ದಂಡ ವಿನಾಯಿತಿ: ದಂಡ ಪಾವತಿಸಲು ಮುಗಿಬಿದ್ದ ಜನ

08/02/2023

ಬೆಂಗಳೂರು: ಸಾರಿಗೆ ನಿಯಮ ನೀಡಿದ್ದ  ಶೇ. 50 ರ  ವಿನಾಯತಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿನಾಯಿತಿ ನೀಡಿದ್ದ ಬರೀ 5 ದಿನಗಳಲ್ಲಿ ಸಾರಿಗೆ ನಿಯಮ ಉಲ್ಲಂಘನೆ ಮಾಡಿದ್ದವರಿಂದ 50 ಕೋಟಿ ದಂಡ ವಸೂಲಿ ಆಗಿದೆ.

ಈ ರೀತಿ ಸಾರಿಗೆ ಇಲಾಖೆ ದಂಡ ಪಾವತಿದಾರರಿಗೆ ವಿನಾಯಿತಿ ನೀಡಿರುವುದರಿಂದ ಅರ್ಧ ದಂಡ ಕಟ್ಟಲು ಜನ ಮುಗಿಬೀಳುತ್ತಿದ್ದಾರೆ.ನಿಯಮ‌ ಉಲ್ಲಂಘನೆ ಮಾಡಿದವರಿಗೆ ವಿನಾಯಿತಿ ಸಂತಸ ನೀಡಿದ್ದು ಆದಷ್ಟು ಬೇಗ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂಬ ತವಕದಲ್ಲಿ ಇವರೆಲ್ಲ ಇದ್ದಂತೆ ಕಾಣುತ್ತಿದೆ.

ಇನ್ನೊಂದು ಕಡೆ ವಿನಾಯಿತಿ ಪಾವತಿಗೆ ನೀಡಿರುವ ಸಮಯದ ಗಡವನ್ನು ವಿಸ್ತರಿಸುವಂತೆ ಸಾರ್ವಜನಿಕರಿಂದ ಒತ್ತಾಯವೂ ಕೇಳಿ ಬರುತ್ತಿದೆ. ಇನ್ನು ಸರ್ಕಾರದ ಖಜಾನೆಗೆ ಶೀಘ್ರವಾಗಿ ಹಣಬರಲು ಇದರೊಂದಿಗೆ ಜನರಿಹೆ ನೆರವು ಸಹ ನೀಡುವಂತಹ ಕಾನೂನು ಸೇವಾಪ್ರಾಧಿಕಾರದ ಮನವಿ ಮೇರೆಗೆ ರಾಜ್ಯ ಸರ್ಕಾರವು ಕೂಡ ಒಪ್ಪಿಗೆ ಸೂಚಿಸಿ ಶೇ. 50 ದಂಡ ಕಟ್ಟಿ ಇದರ ಸದುಪಯೋಗ ಮಾಡಿಕೊಳ್ಳುವುದಕ್ಕೆ ಸಾರಿಗೆ ಇಲಾಖೆ ಅವಕಾಶ ನೀಡಿದೆ.

ಸರಿಯಾಗಿ ಬಳಕೆ ಮಾಡಿಕೊಂಡ ಸಾರ್ವಜನಿಕರು ಕೋಟಿ ಕೋಟಿ ದಂಡವನ್ನು ಕಟ್ಟಿ ತಮ್ಮ ಕೇಸ್‌ಗಳನ್ನು ಕ್ಲಿಯರ್ ಮಾಡಿಕೊಳ್ಳುತ್ತಿದ್ದಾರೆ. 5 ದಿನದಲ್ಲಿ 50 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.‌ ಆನ್‌ ಲೈನ್ ಅಲ್ಲಿಯೇ ಅತಿ ಹೆಚ್ಚು ದಂಡ ಪಾವತಿ ಮಾಡಿದ್ದು, 1 ಕೋಟಿ 80 ಲಕ್ಷ ಪ್ರಕರಣಗಳಲ್ಲಿ 15 ಲಕ್ಷ ಪ್ರಕರಣಗಳು ಮಾತ್ರ ವಿಲೇವಾರಿಯಾಗಿದೆ.‌ ಇನ್ನೂ 4 ದಿನ ಕಾಲಾವಕಾಶ ಇರುವುದರಿಂದ ವಿನಾಯಿತಿ ದಂಡ ಕಟ್ಟುವವರ ಸಂಖ್ಯೆಯು ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.

ಫೆ. 3ರಂದು 7 ಕೋಟಿ 41 ಸಾವಿರ ರೂ. ದಂಡ ವಸೂಲಿಯಾಗಿದ್ದರೇ, ಫೆ. 4ಕ್ಕೆ 9 ಕೋಟಿ 27 ಸಾವಿರ ರೂ. ವಸೂಲಿಯಾಗಿದೆ. ಫೆ. 5ರಂದು 7 ಕೋಟಿ 50 ಲಕ್ಷ ರೂ., ಫೆ. 6ರಂದು 9 ಕೋಟಿ 57 ಲಕ್ಷ ರೂ. ದಂಡ ವಸೂಲಿಯಾಗಿದೆ. ಫೆ. 7ರಂದು 8 ಕೋಟಿ 13 ಲಕ್ಷ ರೂ. ಹಾಗೂ ಫೆ. 8 (12 ಗಂಟೆ) ರಂದು 3 ಕೋಟಿ ರೂ. ದಂಡ ವಸೂಲಿಯಾಗಿದ್ದು, ಒಟ್ಟು 46 ಕೋಟಿ 45 ಲಕ್ಷ (ಸಂಜೆಯ ಒಳಗೆ 50 ಕೋಟಿ) ರೂ. ವಸೂಲಿಯಾಗಿದೆ.

ಫೆಬ್ರವರಿ 11 ರ ತನಕ ಈ ರೀತಿ ವಿನಾಯಿತಿ ಅವಕಾಶ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಇನ್ನು ಸರ್ಕಾರ ನೀಡಿರುವ ಈ ಕಾಲಾವಧಿಯಲ್ಲಿ ದಂಡ ಪಾವತಿ ಕಷ್ಟವಾಗಿದ್ದು, ಇನ್ನೂ ಹೆಚ್ಚು ದಿನಗಳ ಕಾಲಾವಕಾಶಕ್ಕೆ ಮನವಿಯ ಒತ್ತಾಯವು ಹೆಚ್ಚುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version