4:22 PM Wednesday 5 - November 2025

ಮುಸ್ಲಿಮ್ ಮಹಿಳೆಯನ್ನು ತಡೆದು ಬಲವಂತವಾಗಿ ಬುರ್ಖಾ ತೆಗೆಸಿದ 6 ಮಂದಿ ಅರೆಸ್ಟ್

burkka
31/03/2023

ವೆಲ್ಲೂರು: ಮುಸ್ಲಿಮ್ ಮಹಿಳೆಯನ್ನು ತಡೆದು ಬಲವಂತವಾಗಿ ಹಿಜಾಬ್ ತೆಗೆಸಿ ವಿಡಿಯೋ ಚಿತ್ರೀಕರಣ ಮಾಡಿದ 6 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.

ವೆಲ್ಲೂರು ಕೋಟೆ ಪ್ರವೇಶಿಸುತ್ತಿದ್ದ ಮಹಿಳೆಯೊಬ್ಬರನ್ನು ತಡೆದ ದುಷ್ಕರ್ಮಿಗಳು ಬಲವಂತವಾಗಿ ಬರ್ಖಾ ತೆಗೆಸಿದ್ದಾರೆ. ಬುರ್ಖಾ ತೆಗೆಸಲು ಕಾರಣ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ.

ಇಮ್ರಾನ್ ಪಾಷ (22), ಅಶ್ರಫ್‌ ಬಾಷ (20), ಮೊಹಮ್ಮದ್‌ ಫೈಸಲ್‌ (23), ಸಂತೋಷ್‌ (23), ಇಬ್ರಾಹಿಂ ಬಾಷ (24), ಪ್ರಶಾಂತ್ (20) ಬಂಧಿತರಾಗಿದ್ದು, ಇವರಲ್ಲಿ ಹೆಚ್ಚಿನವರು ಆಟೋ ಚಾಲಕರು ಎಂದು ತಿಳಿದು ಬಂದಿದೆ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಮನಃಪರಿವರ್ತನೆ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮಾರ್ಚ್ 27ರಂದು ಈ ಘಟನೆ ನಡೆದಿತ್ತು. ಘಟನೆಯ ಬಳಿಕ ಸ್ಥಳದ ಪೊಲೀಸರು ಪೊಲೀಸ್ ಬೂತ್ ಸ್ಥಾಪಿಸಿದ್ದು, ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version