5:39 PM Wednesday 15 - October 2025

6 ತಿಂಗಳ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ | ಬಂಧನದ ವೇಳೆ ಆರೋಪಿಯ ಚರಿತ್ರೆ ಬಯಲು

cow
10/07/2021

ಹರ್ಯಾಣ:  ಯುವಕನೋರ್ವ ಆರು ತಿಂಗಳ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದ್ದು,  ಮಾಲಿಕ ನೀಡಿರುವ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಭಿವಾನಿ ಜಿಲ್ಲೆಯ ಹಲುವಾಸ್ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಕರುವಿನ ಮಾಲಿಕನ, ಪಕ್ಕದ ಮನೆಯಲ್ಲಿ ವಾಸಿಸುತ್ತ ವ್ಯಕ್ತಿಯೋರ್ವ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿಯುತ್ತಿದ್ದಂತೆಯೇ ಮಾಲಿಕ ಪೊಲೀಸರಿಗೆ ದೂರು ನೀಡಿದ್ದು,  ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

ಬಿಹಾರದ ಯುವಕನಾಗಿರುವ ಆರೋಪಿಯು ಭಿವಾನಿ ಜಿಲ್ಲೆಯ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.  ಪ್ರಾಣಿಗಳ ಜೊತೆಗೆ ಲೈಂಗಿಕ ಕ್ರಿಯೆ ನಡೆಸುವ ಛಾಳಿಯನ್ನು ಹೊಂದಿದ್ದ ಈತ, ಈ ಹಿಂದೆ ಹಲವು ಪ್ರಾಣಿಗಳನ್ನು ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡಿರುವುದನ್ನು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version