ಕರ್ನಾಟಕಕ್ಕೆ  ಕೇರಳ ಕಸ ತುಂಬಿಕೊಂಡು ಬಂದ ಲಾರಿ ವಶ

lorry
10/08/2023

ಚಾಮರಾಜನಗರ: ಕೇರಳದಿಂದ ಮತ್ತೇ ಕರ್ನಾಟಕಕ್ಕೆ ಕಸ ತರುತ್ತಿರುವ ಗುಮಾನಿಗೆ ಈಗ ನಿದರ್ಶನವಾಗಿ ಕಸ ತುಂಬಿದ ಲಾರಿಯನ್ನು ಜನರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

ಕೇರಳದಿಂದ ಗುಂಡ್ಲುಪೇಟೆಗೆ ಅಕ್ರಮವಾಗಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ತಂದಿದ್ದ ಲಾರಿಯನ್ನು  ಜನರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.  ಗುಂಡ್ಲುಪೇಟೆ ಪಟ್ಟಣದ ಮಾಡ್ರಹಳ್ಳಿ ರಸ್ತೆಯಲ್ಲಿ ಕೇರಳ ನೋಂದಣಿಯ ಲಾರಿಯೊಂದು ನಿಂತಿದ್ದ ವೇಳೆ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಲಾರಿಯಲ್ಲಿ ಆಸ್ಪತ್ರೆ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯದ ಮೂಟೆಗಳು ಇರುವುದು ಕಂಡು ಬಂದಿದ್ದು ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.

ತ್ಯಾಜ್ಯ ವಿಲೇವಾರಿಗೆ ಕೇರಳದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವ ಹಿನ್ನೆಲೆ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಕದ್ದುಮುಚ್ಚಿ ಲಾರಿಗಳಲ್ಲಿ ತುಂಬಿಕೊಂಡು ಬಂದು ಗಡಿ ದಾಟಿಸಲಾಗುತ್ತದೆ. ತಾಲೂಕನ್ನು ಪ್ರವೇಶಿಸಿದ ನಂತರ ಸಂಚಾರ ಕಡಿಮೆಯಿರುವ ಪ್ರದೇಶ ಅಥವಾ ಕೇರಳ ರಾಜ್ಯದವರು ಮಾಲೀಕರಾಗಿರುವ ತಾಲೂಕಿನ ನಾನಾ ಕಡೆಗಳ ತೋಟಗಳಲ್ಲಿ ತೋಡುಬಾವಿಗಳಲ್ಲಿ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಆಗಾಗ್ಗೆ ಕೇಳಿ ಬರುವುದಕ್ಕೆ ಕಸ ತುಂಬಿದ ಲಾರಿಗಳು ಆಗಾಗ್ಗೆ ಕಾಣಿಸಿಕೊಳ್ಳುವುದು ಪುಷ್ಠಿ ನೀಡಲಿದೆ.

ಸದ್ಯ, ಲಾರಿ ಹಾಗೂ ಲಾರಿ ಚಾಲಕ ಪೊಲೀಸರ ಗುಂಡ್ಲುಪೇಟೆ ಪೊಲೀಸರ ವಶದಲ್ಲಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version