6:45 AM Thursday 16 - October 2025

ಭಯಾನಕ ಘಟನೆ: 6 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ನಡೆಸಿ ಸುಟ್ಟು ಹಾಕಿದ ವಿಕೃತರು

23/10/2020

ಹೋಶಿಯಾರ್ ಪುರ: ಆರು ವರ್ಷದ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ, ಕೊಂದು  ಮೃತದೇಹವನ್ನು ಸುಟ್ಟು ಹಾಕಿದ ಘಟನೆ ಪಂಜಾಬ್ ನ ಹೊಶಿಯಾರ್ ಪುರದಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇದೊಂದು ಭಯಾನಕ ಘಟನೆಯಾಗಿದೆ. ಸ್ಥಳೀಯ ವ್ಯಕ್ತಿ ಗುರುಪ್ರೀತ್ ಎಂಬಾತ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ.  ಇದಾದ ಬಳಿಕ ಗುರುಪ್ರೀತ್ ನ ತಾತ ಸುರ್ಜೀತ್ ಸೇರಿ ಬಾಲಕಿಯನ್ನು ಹತ್ಯೆ ನಡೆಸಿ ಸುಟ್ಟು ಹಾಕಿದ್ದಾರೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.

ಬಂಧಿತ ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳ ಸಂಬಂಧ ಪೊಕ್ಸೊ ಕಾಯ್ದೆ, ಕೊಲೆ, ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಲಸೆ ಕಾರ್ಮಿಕರ ಪುತ್ರಿಯಾಗಿರುವ ಬಾಲಕಿಯನ್ನು ಅತ್ಯಾಚಾರ ನಡೆಸಿ ಕೊಂದು ಆರೋಪಿಗಳು ಸುಟ್ಟು ಹಾಕಿದ್ದರು. ಇಲ್ಲಿನ ತಾಂಡಾ ಜಲಾಲ್ಪುರ್ ಗ್ರಾಮದ ಮನೆಯಲ್ಲಿ ಬಾಲಕಿಯ ಅರ್ಧ ಸುಟ್ಟ ದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಪಂಜಾಬ್ ರಾಜ್ಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ತೇಹಿಂದರ್ ಕೌರ್ ಅವರು, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಅಕ್ಟೋಬರ್ 26ರರೊಳಗೆ ವರದಿ ನೀಡುವಂತೆ  ಹೋಶಿಯಾರ್ ಪುರದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.

ಅತ್ಯಾಚಾರ ಮಾಡುವವರು ಗಂಡು ಮಕ್ಕಳು | ಅವರಿಗೆ ಮನೆಯವರು ಸರಿಯಾದ ಸಂಸ್ಕಾರ ನೀಡಬೇಕು

ಇತ್ತೀಚಿನ ಸುದ್ದಿ

Exit mobile version