5:45 AM Tuesday 16 - December 2025

ಅಂಬೇಡ್ಕರ್‌ ರವರ 64ನೇ ಮಹಾಪರಿನಿರ್ವಾಣ ದಿನ, ಪ್ರತಿಜ್ಞೆ ಸ್ವೀಕಾರ

08/12/2020

ಮಂಗಳೂರು: ದಲಿತ ಹಕ್ಕುಗಳ ಸಮಿತಿಯು ರಾಜ್ಯ ಸಮಿತಿಯ ಕರೆಯ ಭಾಗವಾಗಿ ಯೆಯ್ಯಾಡಿ ಕೊಂಚಾಡಿಯಲ್ಲಿ ಡಿಸೆಂಬರ್ 6ರಂದು ಅಂಬೇಡ್ಕರ್‌ ರವರ 64ನೇ ಮಹಾಪರಿನಿರ್ವಾಣ ದಿನವನ್ನು ಕ್ಯಾಂಡಲ್ ದೀಪಗಳನ್ನು ಹೊತ್ತಿಸುವ ಪ್ರತಿಜ್ಞೆ ಬೋಧಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.

ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಿತಿ ಅಧ್ಯಕ್ಷರಾದ ತಿಮ್ಮಯ್ಯ ಕೆ. ಕ್ಯಾಂಡಲ್ ದೀಪ ಬೆಳಗಿಸಿದರು. ಅಂಬೇಡ್ಕರ್ ಚಿಂತನೆ ಮತ್ತು ಹೋರಾಟಗಳ ಮಹತ್ವವನ್ನು ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಮುಂದಾಳು ರವಿಚಂದ್ರ ಕೊಪ್ಪಲಕಾಡುರವರು ವಿವರಿಸಿದರು.

ಅಂಬೇಡ್ಕರ್ ಮಹಾಪರಿನಿರ್ವಾಣದ ಪ್ರತಿಜ್ಞೆಯನ್ನು ಆದಿವಾಸಿ ಹಕ್ಕುಗಳ ಹೋರಾಟಗಾರರಾದ ಡಾ. ಕೃಷ್ಣಪ್ಪ ಕೊಂಚಾಡಿ ಅವರು ಬೋಧಿಸಿದರು. ಸಂವಿಧಾನ ಉಳಿಯಲಿ, ಮನುವಾದ ಅಳಿಯಲಿ; ಹಿಂದುತ್ವ ತೊಲಗಲಿ, ಜನಿವಾರ-ಕೋಮುವಾದ ತೊಲಗಿಸೋಣ ಎಂಬ ಧ್ಯೇಯದೊಂದಿಗೆ ಸಮಾನತೆಯ ಜ್ಯೋತಿಯನ್ನು ಎತ್ತಿ ಹಿಡಿಯುತ್ತೇವೆ ಎಂದು ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.

ದಲಿತ ಹಕ್ಕುಗಳ ಸಮಿತಿಯ ನಗರ ಸಮಿತಿ ಮುಂದಾಳು ಪ್ರವೀಣ್ ಕೊಂಚಾಡಿ ಸ್ವಾಗತಿಸಿ, ವಂದಿಸಿದರು.

ಇತ್ತೀಚಿನ ಸುದ್ದಿ

Exit mobile version