2:21 AM Wednesday 20 - August 2025

“ಆಶಾ ಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆ ಶ್ರಮ ಶ್ಲಾಘನೀಯ”

anganawadi
09/06/2021

ಮುದ್ದೇಬಿಹಾಳ : ಕೊವಿಡ್ ಯೋಧರಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಶ್ರಮ ಸ್ಮರಣೀಯ. ನಿತ್ಯ ಮನೆ- ಮನೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮಾತೃ ಸ್ವರೂಪರು ಎಂದು ತಹಶೀಲ್ದಾರ್  ವಿ.ಎಸ್.ಕಡಕಬಾವಿ ಹೇಳಿದರು.

ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯತಿಯ ಆಂಜನಿಯ ದೇವಸ್ಥಾನದ ಆವರಣದಲ್ಲಿ ಆಶಾಕಾರ್ಯಕರ್ತೆಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೀರೆ ದಿನಸಿ ಕಿಟ್‌ ವಿತರಣೆ  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರಿಗೆ ತಮ್ಮದೇ ಆದ ಕುಟುಂಬವಿದೆ. ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುವ ಅವರ ಕಾರ್ಯವನ್ನು ಗೌರವಯುತವಾಗಿ ಕಾಣಬೇಕು. ತಮ್ಮ ಜೀವದ ಹಂಗು ತೊರೆದು ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡುತ್ತಿರುವ ಆಶಾ ಕಾರ್ಯಕರ್ತೆರಿಗೆ ಯಾವುದೇ ಸಂದರ್ಭದಲ್ಲಿ ಅಸಭ್ಯವಾಗಿ ಅನುಚಿತವಾಗಿ ವರ್ತಿಸಬಾರದು ಗೌರವಿಸಬೇಕು  ಎಂದು ಒತ್ತಾಯಿಸಿದರು.

ತಾಲೂಕ ಪಂಚಾಯತ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್ ಹಿರೇಮಠ ಮಾತನಾಡಿ, ಕೊರೊನಾ ಜಾಗೃತಿ ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಸಾಕಷ್ಟಿದೆ. ಅವರ ಸೇವೆಯನ್ನು ಗುರುತಿಸಿ ಸರಕಾರದ ಆದೇಶದ ಮೇರಿಗೆ ಗೌರವಿಸಲಾಗುತ್ತಿದೆ  ಎಂದರು.

ಇತ್ತೀಚಿನ ಸುದ್ದಿ

Exit mobile version