ಅನಂತ್ ಕುಮಾರ್ ಹೆಗಡೆ ಬಳಿಕ ಸಂವಿಧಾನ ತಿದ್ದುಪಡಿಯ ಹೇಳಿಕೆ ನೀಡಿದ ಮತ್ತೋರ್ವ ಬಿಜೆಪಿ ನಾಯಕಿ: ಹಲವು ಅನುಮಾನ ಸೃಷ್ಟಿ!

jyoti mirdha
03/04/2024

ನವದೆಹಲಿ: ಬಿಜೆಪಿ 400 ಸ್ಥಾನ ಗೆದ್ದರೆ ಸಂವಿಧಾನ ಬದಲಾವಣೆಯ ಬಗ್ಗೆ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೀಗ ರಾಜಸ್ಥಾನದ ನಾಗೂರ್ ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ದಾ ಅವರು ಕೂಡ ಸಂವಿಧಾನ ಬದಲಾವಣೆಯ ಮಾತುಗಳನ್ನಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಂದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಈ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ತಿದ್ದುಪಡಿ ಮಾಡಬೇಕಾದರೆ ಉಭಯ ಸದನದಲ್ಲಿ ಪ್ರಚಂಡ ಬಹುಮತ ಬೇಕಾಗಿದೆ. ಪ್ರಸ್ತುತ ಎನ್ ಡಿಎಗೆ ಲೋಕಸಭೆಯಲ್ಲಿ ಮಾತ್ರ ಬಹುಮತವಿದ್ದು, ಲೋಕಸಭೆಯಲ್ಲಿಯೂ ಬಹುಮತ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಅನಂತ್ ಕುಮಾರ್ ಹೆಗಡೆ ಹಾಗೂ ಜ್ಯೋತಿ ಮಿರ್ದಾ ನೀಡಿರುವ ಹೇಳಿಕೆಗಳೆರಡೂ ಒಂದೇ ರೀತಿ ಇದೆ. ಹೀಗಾಗಿ ಹಲವು ಅನುಮಾನಗಳು ಸೃಷ್ಟಿಯಾಗಲು ಕಾರಣವಾಗಿದೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸಂವಿಧಾನ ತಿದ್ದುಪಡಿ ಅಥವಾ ಸಂವಿಧಾನ ಬದಲಾವಣೆಗೆ ಪ್ರಯತ್ನಿಸುತ್ತದೆಯೇ ಎನ್ನುವ ಅನುಮಾನಗಳು ದಟ್ಟವಾಗಿದೆ. ಬಿಜೆಪಿಯ ಅಜೆಂಡಾಗಳನ್ನು ಬಿಜೆಪಿ ಅಭ್ಯರ್ಥಿಗಳೇ ಹೇಳುತ್ತಿದ್ದಾರೆಯೇ? ಇವರು ಹೇಳುತ್ತಿರುವ ಕಠಿಣ ನಿರ್ಧಾರಗಳು ಯಾವುದು? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಇನ್ನೂ ಈ ಹೇಳಿಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಶಶಿತರೂರ್ ಪ್ರತಿಕ್ರಿಯಿಸಿದ್ದು, ಅನಂತ್ ಕುಮಾರ್ ಹೆಗಡೆ ಈ ಹೇಳಿಕೆ ನೀಡಿದಾಗ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಈಗ ಇನ್ನೋರ್ವ ಬಿಜೆಪಿ ಅಭ್ಯರ್ಥಿ ಅದೇ ಹೇಳಿಕೆ ನೀಡಿದ್ದಾರೆ. ಈಗ ಬಿಜೆಪಿ ಟಿಕೆಟ್ ನಿರಾಕರಿಸುತ್ತದೆಯೇ ಎಂದು ಪ್ರಶ್ನಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version