7:41 AM Thursday 16 - October 2025

ಅಪಾಯಕಾರಿ ಕೆಮಿಕಲ್ ಸೋರಿಕೆ: ಹಲವರು ಆಸ್ಪತ್ರೆ ಗೆ ದಾಖಲು

madekere
24/05/2022

ಮಡಿಕೇರಿ: ಕುಶಾಲನಗರದ ಬಳಿ ನೆಲ್ಯಹುದಿಕೇರಿ, ಸಿದ್ದಾಪುರ ರಸ್ತೆಯಲ್ಲಿ ಲಾರಿಯಿಂದ ಅಪಾಯಕಾರಿ ಕೆಮಿಕಲ್ ಸೋರಿಕೆಯಾಗಿದ್ದು, ಜನರಲ್ಲಿ ಭಾರಿ ಆತಂಕ ಮನೆಮಾಡಿದೆ.

ಕೆಮಿಕಲ್ ಸೋರಿಕೆಯಾದ   ಪರಿಣಾಮ ರಸ್ತೆ ಬದಿಯ ಅಂಗಡಿಗಳ ವರ್ತಕರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಜೊತೆಗೆ ಈ ರಸ್ತೆಯಲ್ಲಿ ಓಡಾಡಿದವರ ಆರೋಗ್ಯದಲ್ಲೂ ವ್ಯತ್ಯಯ ಉಂಟಾಗಿದೆ. ಜೊತೆಗೆ ನೆಲ್ಯಹುದಿಕೇರಿ ಶಾಲೆಯ 6 ವಿದ್ಯಾರ್ಥಿಗಳಿಗೂ ಸಹ ಅಸ್ವಸ್ಥರಾಗಿದ್ದಾರೆ.

ಕುಶಾಲನಗರದಿಂದ ಕೇರಳಕ್ಕೆ ಹೋಗುತ್ತಿದ್ದ ಲಾರಿ ಗುಡ್ಡೆಹೊಸೂರಿನಿಂದ ಮಾಕುಟ್ಟೆ ಚೆಕ್‍ಪೋಸ್ಟ್​ವರೆಗೂ ಕೆಮಿಕಲ್ ಸೋರಿಕೆ ಆಗಿದೆ.

ಕೆಮಿಕಲ್ ಸೋರಿಕೆ ಆತಂಕದ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಕೆಮಿಕಲ್ ಸಾಗಿಸುತ್ತಿದ್ದ ಲಾರಿಯನ್ನು ವಿರಾಜಪೇಟೆಯ ಪೆರುಂಬಾಡಿ ಚೆಕ್ ಪೋಸ್ಟ್ ನಲ್ಲಿ ಸೀಜ್ ಮಾಡಿದ್ದಾರೆ.

ಪರಿಶೀಲನೆ ನಡೆಸಿದಾಗ, ಲಾರಿಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಸಾಸ್ ಸಾಗಿಸಲಾಗುತ್ತಿತ್ತು. ಸಾಸ್ ಸೋರಿಕೆಯಿಂದಾಗಿ ಜನರಲ್ಲಿ ಕೆಮ್ಮು, ಕಣ್ಣುರಿ, ತಲೆನೋವು ಕಾಣಿಸಿಕೊಂಡಿದೆ ಎಂಬುದು ತಿಳಿದು ಬಂದಿದೆ.

ಸಾಸ್ ಸೋರಿಕೆಯಿಂದ ಹಲವರು ಅಸ್ವಸ್ದರಾಗಿದ್ದು  ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ :ವಿಜಯೇಂದ್ರಗೆ ನಿರಾಸೆ

ಹಳೆಯ ದ್ವೇಷ: ಉಳ್ಳಾಲದಲ್ಲಿ ಯುವಕನಿಗೆ  ತಂಡದಿಂದ ಚೂರಿ ಇರಿತ

ವಿಸ್ಮಯ ಪ್ರಕರಣ: ಕಿರಣ್ ಕುಮಾರ್ ಗೆ 10 ವರ್ಷ ಜೈಲು | 12 ಲಕ್ಷ ದಂಡ

ಶೂಟಿಂಗ್ ವೇಳೆ ನದಿಗೆ ಬಿದ್ದ ಕಾರು: ನಟಿ ಸಮಂತಾ, ವಿಜಯದೇವರಕೊಂಡ ಇದ್ದ ಕಾರು

ಜೂನ್ 1 ರಿಂದ ಶಾಲಾ ಮಕ್ಕಳಿಗೆ  ಬಿಸಿಯೂಟದ ಜೊತೆಗೆ ಮೊಟ್ಟೆ ವಿತರಣೆ

 

 

ಇತ್ತೀಚಿನ ಸುದ್ದಿ

Exit mobile version