ಭತ್ತದ ಬೆಳೆಗೆ ವಿಮೆಗೆ ಅರ್ಜಿ ಆಹ್ವಾನ: ಆಗಸ್ಟ್ 16 ಕೊನೆ ದಿನ

paddy
12/08/2023

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಅಧಿಸೂಚನೆ ಆಗಿರುತ್ತದೆ.

ಯೋಜನೆಯಡಿಯಲ್ಲಿ ಮೂಡಿಗೆರೆ ತಾಲೂಕಿನಾದ್ಯಂತ ಭತ್ತದ ಬೆಳೆಗೆ ವಿಮೆ ನೋಂದಣಿ ಆರಂಭಗೊಂಡಿದೆ. ಆಸಕ್ತ ಭತ್ತ ಬೆಳೆಗಾರರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಜುಲೈ ತಿಂಗಳಿನಲ್ಲಿ ವಾಡಿಕೆ ಗಿಂತ ಕಡಿಮೆ ಮಳೆ ಬೀಳುತ್ತಿದ್ದು ಹಾಗೂ ಈಗಿನ ಪ್ರಕೃತಿ ವಿಕೋಪಗಳು ಹೆಚ್ಚಾಗಿದ್ದು, ಭತ್ತದ ಬೆಳೆಗೆ ವಿಮೆ ಮಾಡಿಸುವುದು ಅನಿವಾರ್ಯವಾಗಿರುತ್ತದೆ.

ಆದ್ದರಿಂದ ರೈತರು ಈ ಕೂಡಲೇ ಹತ್ತಿರದ ಸಹಕಾರಿ ಬ್ಯಾಂಕ್ ಅಥವಾ ಸಾಮಾನ್ಯ ಸೇವಕೇಂದ್ರಗಳನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳನ್ನು ನೀಡಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ ಹಾಗೂ ನೊಂದಣಿಗೆ ಆಗಸ್ಟ್ 16 ಕೊನೆ ದಿನವಾಗಿರುತ್ತದೆ ಎಂದು  ಇಂದು  ಕೃಷಿ ಅಧಿಕಾರಿ ವೆಂಕಟೇಶ್ ಎಂ ಆರ್, ಬಣಕಲ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version