12:38 PM Wednesday 15 - October 2025

ಅರ್ಚಕ ನೀಡಿದ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ ಭೇದಿ | 20ಕ್ಕೂ ಅಧಿಕ ಅಸ್ವಸ್ಥ

malavalli
28/07/2021

ಮಂಡ್ಯ: ದೇವರ ಪ್ರಸಾದ ಸೇವಿಸಿ 20ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಘಟನೆ ಮಳವಳ್ಳಿ ತಾಲೂಕಿನ ಕಾಗೇಪುರ ಮತ್ತು ಕೊರೇಗಾಲ ಗ್ರಾಮಗಳಲ್ಲಿ ನಡೆದಿದೆ ಎಂದು ವರದಿಯಾಗಿದ್ದು, ಅರ್ಚಕ ತಯಾರಿಸಿದ ಪಂಚಾಮೃತ ಸೇವಿಸಿದ ಬಳಿಕ ರಾತ್ರಿ ಭಕ್ತರು ಅಸ್ವಸ್ಥರಾಗಿದ್ದಾರೆ ಎಂದು ಹೇಳಲಾಗಿದೆ.

ಗ್ರಾಮದ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ಮುಖ್ಯಸ್ಥರೋರ್ವರು ಪೂಜಾ ಕಾರ್ಯಕ್ರಮ ಆಯೋಜಿಸಿದ್ದು, ಅರ್ಚಕ ಶಿವಬಸಪ್ಪ ಅವರು ಬಾಳೆ ಹಣ್ಣು ಬೆಲ್ಲ, ಅವಲಕ್ಕಿ, ಸಕ್ಕರೆ, ಏಲಕ್ಕಿಯಿಂದ ತಯಾರಿಸಿದ ಪಂಚಾಮೃತ ಪ್ರಸಾದವನ್ನು ತಯಾರಿಸಿದ್ದರು.

ಪೂಜೆಯಲ್ಲಿ ಗ್ರಾಮದ 6 ಮಂದಿ ಸೇರಿದಂತೆ ಸುಮಾರು 25 ಮಂದಿ ಅರ್ಚಕ ಪ್ರಸಾದ ಹಂಚಿದ್ದ ಎಂದು ಹೇಳಲಾಗಿದೆ. ಪ್ರಸಾದ ಸ್ವೀಕರಿಸಿದ ಬಳಿಕ ಸೋಮವಾರ ರಾತ್ರಿ ಭಕ್ತರಿಗೆ ವಾಂತಿ, ಭೇದಿಯಾಗಿದೆ. ಸಂಜೆ ವೇಳೆ ಪ್ರಸಾದ ಸ್ವೀಕರಿಸಿದ ಬಹುತೇಕ ಭಕ್ತರು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ದೊರೆತ ಬಳಿಕ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ್, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಅನಿಲ್, ಸ್ಥಳೀಯ ವೈದ್ಯಾಧಿಕಾರಿ ಡಾ.ಸಚಿನ್, ಡಾ.ಶಿವಶಂಕರ್ ಅಸ್ವಸ್ಥಗೊಂಡಿರುವವರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಇದೊಂದು ಗಂಭೀರ ವಿಚಾರವಾಗಿದ್ದರೂ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಲಾಗಿದೆ.  ಪ್ರಸಾದ ತಯಾರಿಸಿದ ಅರ್ಚಕನ ಮಾಹಿತಿ ಪಡೆದು ಪ್ರಸಾದವನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ದೇವರ ಮೇಲಿನ ಭಕ್ತಿಯಿಂದ ಅರ್ಚಕ ಏನನ್ನು ನೀಡಿದರೂ ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ. ಆದರೆ ಅರ್ಚಕರು ಲಾಭ ಮಾಡುವ ಉದ್ದೇಶದಿಂದಲೋ, ನಿರ್ಲಕ್ಷ್ಯದಿಂದಲೋ ಜನರ ಪ್ರಾಣದ ಜೊತೆಗೆ ಚೆಲ್ಲಾಟ ಮಾಡುತ್ತಿರುವುದರಿಂದ ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ. ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪ್ರಸಾದ ವಿತರಣೆಗೂ ಮುನ್ನ ಅದನ್ನು ಪರಿಶೀಲನೆ ನಡೆಸಲು ಸರ್ಕಾರ ನಿಯಮವನ್ನು ರೂಪಿಸುವ ಅಗತ್ಯವಿದೆ ಎನ್ನುವ ಮಾತುಗಳು ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದರೂ ಈ ಬಗ್ಗೆ ಇನ್ನೂ ಯಾವುದೇ ಕ್ರಮಗಳು ಆಗಿಲ್ಲ ಎನ್ನುವ ಅಸಮಾಧಾನಗಳು ಕೇಳಿ ಬಂದಿವೆ.

ಇನ್ನಷ್ಟು ಸುದ್ದಿಗಳು…

“ನಮ್ಮನ್ನು ಕೈ ಬಿಡಬೇಡಿ…”! ಸಚಿವ ಸ್ಥಾನಕ್ಕಾಗಿ ಯಡಿಯೂರಪ್ಪ ಹಿಂದೆ ಬಿದ್ದ ಮಾಜಿ ಸಚಿವರು, ಶಾಸಕರು!

ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆ ಮಾಡಿಸಿದ್ರೆ ಮಕ್ಕಳಾಗ್ತವೆ | ಸಿ.ಎಂ.ಇಬ್ರಾಹಿಂ

ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದಿದ್ದ ಯುವಕನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ ಪತಿ!

ಕಟು ವಾಕ್ಯಗಳಿಂದ ಯಡಿಯೂರಪ್ಪ ರಾಜೀನಾಮೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ಆಯುರ್ವೇದ ವೈದ್ಯೆ!

ಇತ್ತೀಚಿನ ಸುದ್ದಿ

Exit mobile version