8:34 PM Saturday 24 - January 2026

ಫೆಲೆಸ್ತೀನ್ ನಲ್ಲಿ ವಂಶ ಹತ್ಯೆ: ಇಸ್ರೇಲ್ ಸೇನೆಯ ಇಬ್ಬರಿಗೆ ವಿಝಾ ನಿರಾಕರಿಸಿದ ಆಸ್ಟ್ರೇಲಿಯಾ

14/12/2024

ಫೆಲೆಸ್ತೀನ್ ನಲ್ಲಿ ವಂಶ ಹತ್ಯೆ ನಡೆಸುತ್ತಿರುವ ಇಸ್ರೇಲ್ ಸೇನೆಯ ಇಬ್ಬರಿಗೆ ಆಸ್ಟ್ರೇಲಿಯ ವಿಝಾ ನಿರಾಕರಿಸಿದೆ. ಗಾಝಾದ ವಂಶ ಹತ್ಯೆಯಲ್ಲಿ ಭಾಗಿಯಾಗಿರುವುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದ ಬಳಿಕ ಈ ಸೈನಿಕರಿಗೆ ವಿಝಾವನ್ನು ನಿರಾಕರಿಸಲಾಗಿದೆ.

ತನ್ನ ಅಜ್ಜಿಯನ್ನು ಭೇಟಿ ಮಾಡುವುದಕ್ಕಾಗಿ ಓಮರ್ಬೆರ್ ಗರ್ ಮತ್ತು ಎಲ್ಲ ಬೆರ್ ಗರ್ ಎಂಬ ಸೈನಿಕರಿಬ್ಬರು ವಿಝಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಜೊತೆಗೆ ವಿಝಾವನ್ನು ಕೋರಿದ್ದ ಇವರ ಕುಟುಂಬದ ನಾಲ್ಕು ಮಂದಿಗೆ ವಿಝ ಲಭ್ಯವಾಗಿದೆ. ಯುದ್ಧಾಪರಾದಗಳಲ್ಲಿ ಮತ್ತು ವಂಶ ಹತ್ಯೆಯಲ್ಲಿ ನೀವು ಭಾಗಿಯಾಗಿದ್ದೀರಾ ಎಂಬಂತಹ ಪ್ರಶ್ನೆಗಳನ್ನು ಈ ಸೈನಿಕರಿಗೆ ಕೇಳಲಾಗಿತ್ತು.

ಮೂರು ವಾರಗಳ ಹಿಂದೆ ಇಸ್ರೇಲ್ ನ ಮಾಜಿ ರಕ್ಷಣಾ ಸಚಿವ ಎಯ್ ಲೆಟ್ ಶಾಕೋದ್ ಅವರಿಗೂ ಅಷ್ಟ್ರೆಲಿಯಾ ವಿಝಾ ನಿರಾಕರಿಸಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version