ಅಯ್ಯಪ್ಪ ಸ್ವಾಮಿ ಕುರಿತು ಸಿನೆಮಾ ಹೊಗಳಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ಅಂಗಡಿ ಧ್ವಂಸ

ಶಬರಿಮಲೆ ಅಯ್ಯಪ್ಪ ದೇವರ ಬಗ್ಗೆ ಹೊಸತಾಗಿ ಬಿಡುಗಡೆಯಾದ ಚಲನಚಿತ್ರವನ್ನು ಬೆಂಬಲಿಸಿದ್ದ ಕಾರಣಕ್ಕೆ ಸಿಪಿಐ ಕಾರ್ಯಕರ್ತರೊಬ್ಬರ ಅಂಗಡಿಯನ್ನು ಕೀಡಿಗೇಡಿಗಳು ಧ್ವಂಸಮಾಡಿರುವ ಘಟನೆ ಕೇರಳ ಜಿಲ್ಲೆಯ ಮಲಪ್ಪುರಂನಲ್ಲಿ ನಡೆದಿದೆ.
ಸಿಪಿಐ ಕಾರ್ಯಕರ್ತರಾಗಿರುವ ಪ್ರಗೀಲೇಶ್ ಗೆ ಸೇರಿರುವ ಲೈಟ್ ಮತ್ತು ಸೌಂಡ್ ಅಂಗಡಿಯನ್ನು ಧ್ವಂಸ ಮಾಡಿದ್ದು,ಹೊಸದಾಗಿ ನಿರ್ಮಿಸಿದ್ದ ಬೋಡ್ ಹಾಗೂ ಅಲಂಕಾರಿಕ ಲೈಟ್ ಗಳು ಕೀಡಿಗೇಡಿಗಳಿಂದ ಹಾನಿಗೊಳಗಾಗಿದೆ.ಇದರಿಂದಾಗಿ ಪ್ರಗೀಲೇಶ್ ಗೆ ನಷ್ಟ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ನಟ ಉನ್ನಿಮುಕುಂದನ್ನ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶಬರಿಮಲೆ ಅಯ್ಯಪ್ಪ ಕುರಿತಾದ ಮಲಿಕಪುರಂ ಚಿತ್ರದಲ್ಲಿ ಗ್ರಾಮದ ಬಾಲಕಿಯೊಬ್ಬಳು ಶಬರಿಮಲೆ ಅಯ್ಯಪ್ಪ ನ ದರ್ಶನ ಪಡೆಯುವ ಇಂಗಿತವನ್ನು ವ್ಯಕ್ತಪಡಿಸುವ ಕಥೆಯನ್ನು ಚಲನಚಿತ್ರ ಒಳಗೊಂಡಿರುತ್ತದೆ.ಈ ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆಗಳು ತೀವ್ರ ವ್ಯಾಪಕವಾಗಿತ್ತು
ಈ ಹಿನ್ನಲೆಯಲ್ಲಿ ಪ್ರಗೀಲೇಶ್ ಚಲನಚಿತ್ರದ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕಿದರು ಎನ್ನಲಾಗಿದೆ.ಬಳಿಕ ಅವರಿಗೆ ಅನೇಕ ಬೆದರಿಕೆ ಕರೆಗಳು ಬರುತ್ತಿದ್ದು, ಅಂಗಡಿಯನ್ನು ಧ್ವಂಸ ಮಾಡುವ ಬಗ್ಗೆ ಎಚ್ಚರಿಕೆಯನ್ನು ನೀಡಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka