9:32 AM Thursday 16 - October 2025

ಬಾದಾಮಿ ನೀರು ಸೇವನೆಯಿಂದ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು!

badam
04/10/2022

ಬಾದಾಮಿ ಅಂದ್ರೆ, ಯಾರಿಗೆ ಇಷ್ಟ ಇಲ್ಲ ಹೇಳಿ, ಬಾದಾಮಿ ಕೇವಲ ರುಚಿಗೆ ಮಾತ್ರವಲ್ಲದೇ ನಮ್ಮ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ಹಾಗೆಯೇ ಬಾದಾಮಿಯ ನೀರು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ.

ಬಾದಾಮಿ ನೀರನ್ನು ಸೇವನೆ ಮಾಡುವುದರಿಂದ ದೇಹ ತಂಪಾಗಿರುತ್ತದೆ. ಒಂದಷ್ಟು ಬಾದಾಮಿಯನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಒಂದು ವಾರಗಳ ವರೆಗೆ  ಬಾದಾಮಿ ನೀರನ್ನು ಸೇವನೆ ಮಾಡುವುದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ದೇಹವು ದುರ್ಬಲವಾಗಿರುವವರು ಬಾದಾಮಿ ನೀರನ್ನು ಸೇವನೆ ಮಾಡುವುದು ಉತ್ತಮ. ಯಾಕೆಂದರೆ ಬಾದಾಮಿ ನೀರು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಬಾದಾಮಿ ನೀರಿನ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ಜೊತೆಗೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿಡಲು ಬಾದಾಮಿ ನೀರು ಒಳ್ಳೆಯದು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version