12:27 PM Tuesday 21 - October 2025

ಬೈಕ್ ಗಳ ಮುಖಾಮುಖಿ ಡಿಕ್ಕಿ: ಮೂವರು ಸ್ಥಳದಲ್ಲಿಯೇ ಸಾವು | ಮೂರು ದಿಕ್ಕಿಗೆ ಹಾರಿ ಬಿದ್ದ ನಾಲ್ವರು ಸವಾರರು

23/02/2021

ಹುಬ್ಬಳ್ಳಿ:  ಎರಡು ಬೈಕ್ ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು, ಎರಡು ಬೈಕ್ ನಲ್ಲಿದ್ದ ಒಟ್ಟು ನಾಲ್ವರು ಸವಾರರು ಎಸೆಲ್ಪಟ್ಟು ಪ್ರತ್ಯೇಕ ಸ್ಥಳದಲ್ಲಿ ಬಿದ್ದಿದ್ದು, ಪರಿಣಾಮವಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಹುಬ್ಬಳ್ಳಿಯ ಶರೇವಾಡ ಟೋಲ್ ಗೇಟ್ ಬಳಿಯಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಎರಡು ಬೈಕ್ ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಈ ಸಂದರ್ಭ ಎರಡೂ ಬೈಕ್ ನಲ್ಲಿದ್ದವರು  ಎತ್ತಿಎಸೆಯಲ್ಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ಸಾಗಿಸಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version