10:17 AM Monday 15 - December 2025

ಪಟಾಕಿ ಸಿಡಿದು ಬಾಲಕಿಯ ಕಣ್ಣು, ಮುಖಕ್ಕೆ ತೀವ್ರ ಹಾನಿ

16/11/2020

ಬೆಂಗಳೂರು: ಪಟಾಕಿ ಸಿಡಿದು 12 ವರ್ಷದ ಬಾಲಕಿಯ ಮುಖ ಹಾಗೂ ಕೈ, ಕಣ್ಣುಗಳಿಗೆ ತೀವ್ರ ಹಾನಿಯಾಗಿದ್ದು, ಪ್ಲಾಸ್ಟಿಕ್  ಸರ್ಜರಿ ಮಾಡಿ ಎಂದು ವೈದ್ಯರು ಸೂಚನೆ ನೀಡಿದ ಘಟನೆ ನಡೆದಿದೆ.

ಭಾನುವಾರ 12 ವರ್ಷದ ಬಾಲಕಿ ಹೂಕೊಂಡ ಹಚ್ಚಿದ ಸಂದರ್ಭದಲ್ಲಿ ಅದು ಬ್ಲಾಸ್ಟ್ ಆದ ಪರಿಣಾಮ, ಬಾಲಕಿಯ ಕಣ್ಣಿಗೆ ಶೇ.50ರಷ್ಟು ಹಾನಿಯಾಗಿದ್ದು, ಕೂಡಲೇ ನಗರದ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕರೆತರಲಾಗಿದೆ. ಪ್ರಾಥಮಿಕ ತಪಾಸಣೆ ನಡಿಸಿದ ವೈದ್ಯರು ಕೈ ಮತ್ತು ಕಣ್ಣಿಗೆ ತ್ವರಿತ ಚಿಕಿತ್ಸೆ ನೀಡಿ, ಸಂಪೂರ್ಣ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆಂದು ತಿಳಿಸಿದ್ದಾರೆ.

ಬಾಲಕಿಯನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಪಟಾಕಿ ಹಚ್ಚಬೇಡಿ ಎಂದು ಎಷ್ಟು ಹೇಳಿದರೂ, ಕೇಳದ ಜನರು ಇಂತಹ ಅನಾಹುತಗಳ ಬಗ್ಗೆ ಯಾಕೆ ಚಿಂತಿಸುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ, ಜೀವಕ್ಕೆ ಹಾನಿಯಾಗುವಂತಹ ಪರಿಸ್ಥಿತಿಯಲ್ಲಿಯೂ ಪಟಾಕಿ ಪ್ರೇಮ ಗಮನಿಸಿದರೆ, ಜನರು ಇಷ್ಟೊಂದು ಮೂಢರೇ? ಎಂದು ಆಶ್ಚರ್ಯ ಉಂಟಾಗುತ್ತಿದೆ ಎನ್ನುವ ಅಭಿಪ್ರಾಯಗಳು ಸದ್ಯ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version