ಬಂಗ್ಲೆಗುಡ್ಡೆ: ಒಂದು ಅಸ್ಥಿಪಂಜರದ ಗುರುತು ಪತ್ತೆ

ಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ನಿನ್ನೆ ಹಲವು ಅಸ್ಥಿ ಪಂಜರಗಳು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಸ್ಥಿಪಂಜರಗಳ ಪೈಕಿ ಒಬ್ಬ ವ್ಯಕ್ತಿಯ ಗುರುತು ಪತ್ತೆ ಮಾಡಲಾಗಿದೆ ಅಂತ ಹೇಳಲಾಗಿದೆ.
ನಿನ್ನೆ ಪತ್ತೆಯಾಗಿರುವ ಹಲವು ಅಸ್ಥಿಪಂಜರಗಳ ಪೈಕಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ ಎಂಬವರ ಅಸ್ಥಿ ಪಂಜರ ಕೂಡ ಸೇರಿದೆ ಅಂತ ತಿಳಿದು ಬಂದಿದೆ.
ವರದಿಗಳ ಪ್ರಕಾರ, ಮೈಸೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದ ಅಯ್ಯಪ್ಪ ನಾಪತ್ತೆಯಾಗಿದ್ದರು ಅಂತ ಕಟ್ಟು ಪೊಲೀಸ್ ಠಾಣೆಯಲ್ಲಿ ಕುಟುಂಬದ ಸದಸ್ಯರು ದೂರು ನೀಡಿದ್ದರು. ಆದ್ರೆ ಆ ನಂತರವೂ ಅಯ್ಯಪ್ಪ ಅವರ ಸುಳಿವು ಲಭ್ಯವಾಗಿರಲಿಲ್ಲ.
ಐಡಿ ಕಾರ್ಡ್ ವೊಂದರ ಆಧಾರದಲ್ಲಿ ಅಯ್ಯಪ್ಪನವರ ಗುರುತುಪತ್ತೆ ಮಾಡಲಾಗಿದೆ. ಇದು ಅವರದ್ದೇ ಮೃತದೇಹವೇ ಎನ್ನುವುದು ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದ ಮೇಲೆಯೇ ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD