2:09 PM Sunday 14 - September 2025

ರಾತ್ರಿ ಊಟ ಮಾಡಿ ಮಲಗಿದ್ದ ವೃದ್ಧೆ ಬೆಳಗ್ಗೆ ಕೆರೆಯಲ್ಲಿ ಶವವಾಗಿ ಪತ್ತೆ!

drown water
26/10/2022

ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೋರ್ವರು ಬಾವಿಗೆ ಹಾರಿ‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಳ್ಳಿ ಗ್ರಾಮದ ಮೂಡುಪೆರಂಪಳ್ಳಿ‌ ಎಂಬಲ್ಲಿ ಅಕ್ಟೋಬರ್ 25ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮೂಡುಪೆರಂಪಳ್ಳಿ ನಿವಾಸಿ 70ವರ್ಷದ ಲಿಲ್ಲಿ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಇವರು ಸುಮಾರು 2 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದರು.‌ ಬೆಳಿಗ್ಗೆ ಎದ್ದು ಮನೆಯವರು ನೋಡುವಾಗ ಕೊಠಡಿಯಲ್ಲಿ ಲಿಲ್ಲಿ ಅವರು ಇರಲಿಲ್ಲ.

ಸುತ್ತಮುತ್ತ ಹುಡುಕಾಡಿದಾಗ ಮನೆಯ ಸಮೀಪದ ಬಾವಿಯಲ್ಲಿ ಲಿಲ್ಲಿ ಅವರ ಮೃತದೇಹ ತೇಲುತ್ತಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು:

ಮನೆಯ ಕಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ವೊಂದನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಘಟನೆ 80ಬಡಗುಬೆಟ್ಟು ಗ್ರಾಮದ ಬೈರಂಜೆಯಲ್ಲಿ ಅಕ್ಟೋಬರ್‌ನಲ್ಲಿ 23ರಂದು ಬೆಳಕಿಗೆ ಬಂದಿದೆ.

ಬೈರಂಜೆ ನಿವಾಸಿ ರಾಜೇಶ್ವರ್ ಎಂಬವರು ಎಂದಿನಂತೆ ಅ.22ರಂದು ರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ಮನೆಯ ಕಂಪೌಂಡ್ ಒಳಗೆ ಹ್ಯಾಂಡ್ ಲಾಕ್ ಮಾಡಿ ಬೈಕ್  ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ಮನೆಯ ಹೊರಗಡೆ ಬಂದು ನೋಡಿದಾಗ ಕಂಪೌಂಡ್ ಬಳಗೆ ನಿಲ್ಲಿಸಿದ ಬೈಕ್ ಇರಲಿಲ್ಲ. ಕಳವಾದ ಬೈಕ್ ನ ಅಂದಾಜು ಬೆಲೆ 20 ಸಾವಿರ ಆಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version