8:16 PM Wednesday 15 - October 2025

ಫುಡ್ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ: ಇಬ್ಬರು ಕಾರ್ಮಿಕರು ಸಜೀವ ದಹನ

death
23/08/2021

ಬೆಂಗಳೂರು: : ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಅನಿಲ ಸೋರಿಕೆಯಿಂದ ಸ್ಪೋಟ ಸಂಭವಿಸಿ ಇಬ್ಬರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಮಾಗಡಿ ರಸ್ತೆಯಲ್ಲಿರುವ ಗೋಪಾಲಪುರ ಬಳಿ ನಡೆದಿದ್ದು, ಮೃತಪಟ್ಟವರು ಬಿಹಾರ ಮೂಲದ ಕಾರ್ಮಿಕರು ಎಂದು ತಿಳಿದು ಬಂದಿದೆ.

ಸೌರಭ್ ಹಾಗೂ ಮನೀಶ್ ಮೃತ ಕಾರ್ಮಿಕರಾಗಿದ್ದು, ಘಟನೆಯಲ್ಲಿ ಮನೀಷ್ ಸೇರಿ ನಾಲ್ವರು ಗಾಯಗೊಂಡಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಮಧ್ಯಾಹ್ನ 1.45ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು ಬೆಂಕಿ ನಂದಿಸಿದ್ದಾರೆ.

ಆಹಾರ ತಯಾರಿಸುವ ಬಾಯ್ಲರ್ ಹೆಚ್ಚು ಹೀಟ್ ಆಗಿ ಸ್ಫೋಟಗೊಂಡ ಪರಿಣಾಮ ಸಿಲಿಂಡರ್ ಕೂಡಸ್ಫೋಟವಾಗಿದೆ‌. ಘಟನೆಯಲ್ಲಿ‌ ಮನೀಶ್ ಹಾಗೂ ಸೌರಭ್ ಎಂಬುವವರು ಮೃತಪಟ್ಟಿದ್ದಾರೆ ಎಂದು ಘಟನಾ ಸ್ಥಳಕ್ಕೆ ಆಗಮಿಸಿದ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಪಾಟೀಲ್  ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು….

ಪಿಸ್ತೂಲ್ ಸ್ವಚ್ಛಗೊಳಿಸುತ್ತಿರುವ ವೇಳೆ ಹಾರಿದ ಗುಂಡು | ಕಾನ್ಟ್ಟೇಬಲ್ ದಾರುಣ ಸಾವು

ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ಕೇಂದ್ರಬಿಂದು ಆಗದಿರಲಿ: ಸಿಂಗಪುರ ಪ್ರಧಾನಿ

ಕಳ್ಳ ನುಂಗಿದ ಚಿನ್ನದ ಸರವನ್ನು ಹೊರ ತೆಗೆದದ್ದು ಹೇಗೆ ಗೊತ್ತಾ? | ಕೊನೆಗೂ ಕಳ್ಳನ ಪ್ಲಾನ್ ಪ್ಲಾಪ್ ಆಯಿತು!

ಬಿಗ್ ಬಾಸ್ ಕ್ಯಾಮರ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಲಾಗಿದೆ | ಸ್ಪರ್ಧಿಯಿಂದ ಗಂಭೀರ ಆರೋಪ

ಅಫ್ಘಾನಿಸ್ತಾನದ ಮಹಿಳೆಯರನ್ನು ಬಹಿರಂಗವಾಗಿ ಮಾರಾಟ ಮಾಡಲಾಯ್ತೆ? | ವೈರಲ್ ವಿಡಿಯೋದ ಹಿಂದಿನ ಸತ್ಯಾಂಶ ಏನು?

ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ಮಹಿಳೆಯಿಂದ ಬ್ಲ್ಯಾಕ್ ಮೇಲ್ | ದೂರು ದಾಖಲು

ಬಿಜೆಪಿಯವರು ಜನಾಶೀರ್ವಾದ ಯಾತ್ರೆಯಲ್ಲ, ಕ್ಷಮೆಯಾಚನೆ ಯಾತ್ರೆ ಮಾಡಬೇಕು | ಮಾಜಿ ಸಂಸದ ಚಂದ್ರಪ್ಪ ಆಕ್ರೋಶ

 

 

ಇತ್ತೀಚಿನ ಸುದ್ದಿ

Exit mobile version