9:18 AM Saturday 17 - January 2026

ನೆಲ್ಯಾಡಿ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

04/01/2021

ನೆಲ್ಯಾಡಿ: ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲ್ಯಾಡಿಯಲ್ಲಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ನೆಲ್ಯಾಡಿ ನವೀನ್ ಇಂಟರ್ ಲಾಕ್ ಮಾಲಕ, ನೆಲ್ಯಾಡಿ ನಿವಾಸಿಯಾಗಿರುವ ವಿ.ಜೆ.ಜೋಸೆಫ್ ಎಂಬವರ ಪುತ್ರಿ ನವ್ಯಾ ಜೋಸೆಫ್(21) ಆತ್ಮಹತ್ಯೆಗೆ ಶರಣಾಗಿರುವ ಯುವತಿಯಾಗಿದ್ದು, ಮಂಗಳೂರಿನ  ಕಾಲೇಜಿನಲ್ಲಿ ಪದವಿ ಮುಗಿಸಿದ್ದ ನವ್ಯಾ ಆ ಬಳಿಕ ಮನೆಯಲ್ಲಿಯೇ ಇದ್ದರು.

ಇಂದು ಬೆಳಗ್ಗೆ 8 ಗಂಟೆಯಾದರೂ ನವ್ಯಾ ರೂಮ್ ನಿಂದ ಹೊರ ಬಂದಿರಲಿಲ್ಲ, ಈ ಸಂದರ್ಭ ಆಕೆಯ ತಾಯಿ ಮಗಳ ಮೊಬೈಲ್ ಗೆ ಕರೆ ಮಾಡಿದ್ದು, ಆದರೆ ಕರೆ ಸ್ವೀಕರಿಸಲಿಲ್ಲ. ಇದರಿಂದ ಅನುಮಾನಗೊಂಡ ನವ್ಯಾ ಅವರ ತಂದೆ  ಜೋಸೆಫ್ ರವರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಮೃತ ನವ್ಯಾ ತಂದೆ  ತಾಯಿ ಹಾಗೂ ಓರ್ವ ಸಹೋದರ ಹಾಗೂ ಓರ್ವಳು ಸಹೋದರಿಯನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version