ಬಿಜೆಪಿಗೆ ಸೇರದಿದ್ರೆ ನಮ್ಮನ್ನು ಅರೆಸ್ಟ್ ಮಾಡಲಾಗುತ್ತಂತೆ: ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟ ದಿಲ್ಲಿ ಸಚಿವೆ ಅತಿಶಿ

ಬಿಜೆಪಿಗೆ ಸೇರದಿದ್ದರೆ ನನ್ನನ್ನು ಮತ್ತು ಇತರ ಮೂರು ಎಎಪಿ ನಾಯಕರನ್ನು ಜಾರಿ ನಿರ್ದೇಶನಾಲಯ ಬಂಧಿಸಲಿದೆ ಎಂಬ ಸ್ಪೋಟಕ ಮಾಹಿತಿಯನ್ನು ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಹೇಳಿದ್ದಾರೆ.
ನನ್ನ ಜೊತೆ ಸೌರಭ್ ಭಾರದ್ವಾಜ ದುರ್ಗೇಶ್ ಪಾಟಕ್ ಮತ್ತು ರಾಘವ್ ಚಡ್ಡ ಅವರನ್ನು ಈಡಿ ಬಂಧಿಸಲಿದೆ ಎಂದು ಅತಿಷಿ ಹೇಳಿದ್ದಾರೆ. ಶೀಘ್ರದಲ್ಲಿ ನಮ್ಮ ನಿವಾಸದ ಮೇಲೆ ಈಡಿ ದಾಳಿ ನಡೆಯಲಿದೆ. ನಂತರ ನಮ್ಮನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ನನಗೆ ತಿಳಿಸಲಾಗಿದೆ. ಬಿಜೆಪಿ ಈಗ ಆಮ್ ಆದ್ವಿ ಪಕ್ಷದ ಮುಂಚೂಣಿ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದವರು ಸುದ್ದಿಗೋಷ್ಠಿಯಲ್ಲಿ ಮಾತಾಡುತ್ತಾ ಹೇಳಿದ್ದಾರೆ.
ಬಿಜೆಪಿ ಸೇರಿಕೊಳ್ಳುವಂತೆ ನನ್ನನ್ನು ಸಂಪರ್ಕಿಸಲಾಗಿದೆ. ನಾನು ಬಿಜೆಪಿ ಸೇರುವ ಮೂಲಕ ನನ್ನ ರಾಜಕೀಯ ಜೀವನವನ್ನು ಉಳಿಸಿಕೊಳ್ಳಬಹುದು ಇಲ್ಲವೇ ಮುಂದಿನ ಒಂದು ತಿಂಗಳಲ್ಲಿ ಬಂಧಿಸಬಹುದು ಎಂದು ನನಗೆ ತಿಳಿಸಲಾಗಿದೆ. ಪ್ರತಿಯೊಬ್ಬ ಆಮ್ ಆದ್ಮಿ ನಾಯಕನನ್ನು ಜೈಲಿಗೆ ಹಾಕಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಹತ್ತಿರವಿರುವ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ ಎಂದವರು ಉತ್ತರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth