7:46 PM Thursday 18 - December 2025

ಸಿಟಿ ರವಿಗೆ ಮೂಳೆ ಬಿರಿಯಾನಿ, ಚಿಕನ್ ಪಾರ್ಸೆಲ್ ಮಾಡಿದ ಕೈ ಪಡೆ

congress
24/02/2023

ಬೆಂಗಳೂರು: ರಾಜ್ಯದಲ್ಲಿ ಈಗ ಮಾಂಸಹಾರ ತಿಂದು ದೇಗುಲ ಪ್ರವೇಶದ ವಿಚಾರ ಸಕತ್ ಸದ್ದು ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿಗೆ ಬಿರಿಯಾನಿ, ನಲ್ಲಿಮೂಳೆ ಪಾರ್ಸೆಲ್ ಹೋಗಿದೆ. ಈ ಮೂಲಕ ಸಿಟಿ ರವಿಗೆ ಕೈ ಪಾಳಯ ಠಕ್ಕರ್ ಕೊಟ್ಟಿದೆ.

ಅಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಧರ್ಮಸ್ಥಳ ದೇಗುಲದ ಭೇಟಿ ರಾಜಕೀಯದಲ್ಲಿ ದೊಡ್ಡ ಮಟ್ಟದ ವಿವಾದ ಸೃಷ್ಟಿಯಾಗಿತ್ತು. ಇದನ್ನು ಅಂದು ಕಟುವಾಗಿ ಟೀಕೆ ಮಾಡಿದ್ದ ಬಿಜೆಪಿ ನಾಯಕ ಸಿಟಿ ರವಿ, ಮೊನ್ನೆ ನಾನ್ ವೆಜ್ ತಿಂದು ನಾಗಬನಕ್ಕೆ ಭೇಟಿ ಕೊಟ್ಟಿದ್ದು ಕೈಪಾಳಯಕ್ಕೆ ಸರಕು ಸಿಕ್ಕಂತಾಗಿದೆ. ಇದನ್ನು ವಿರೋಧಿಸಿ ಯೂತ್ ಕಾಂಗ್ರೆಸ್  ಪಡೆ ಇಂದು  ಬೆಳಗ್ಗೆ ಸಿಟಿ ರವಿಗೆ ನಲ್ಲಿ ಮೂಳೆ ಬಿರಿಯಾನಿ ಚಿಕನ್ ಪಾರ್ಸೆಲ್ ಮಾಡಿದರು.ಅಲ್ಲದೇ ಸಿಟಿ ರವಿ ನಾನ್ ವೆಜ್ ತಿನ್ನುವ ಬಗ್ಗೆ ಅಣಕು ಪ್ರದರ್ಶನ ಮಾಡಿದರು.ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸಿ.ಟಿ. ರವಿಗೆ ದೇವಾಲಯ ಪ್ರವೇಶ ನಿರ್ಬಂಧ ಹೇರಬೇಕು ಅಂತಾ ಮುಜರಾಯಿ ಇಲಾಖೆಗೆ ಕಾಂಗ್ರೆಸ್ ಆಗ್ರಹ ಪಡಿಸಿದೆ. ಕೂಡಲೇ ರವಿ ಕ್ಷಮೆಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಅಂದು ಸಿದ್ದರಾಮಯ್ಯ ನಡೆಯನ್ನು ಖಂಡಿಸಿ ಪುಂಖಾನುಪುಂಖವಾಗಿ ಮಾತಾನಾಡಿದ್ದ ಬಿಜೆಪಿ ನಾಯಕರು, ಈಗ ನಾನ್ ವೆಜ್ ಸಮರದಲ್ಲಿ ಸೈಲೆಂಟ್ ಆಗಿದ್ದಾರೆ. ನಾನು ದೇಗುಲದ ಹೊರಭಾಗದಲ್ಲಿ ಇದ್ದೆ, ದೇವರ ದರ್ಶನ ಮಾಡಿಲ್ಲ ಸಿಟಿ ರವಿ ಡ್ಯಾಮೇಜ್ ಸಮಜಾಯಿಷಿ ನೀಡಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version