2:49 PM Wednesday 15 - October 2025

ಬಸ್ಸಿನಿಂದ  ಕೆಸರು ಹಾರಿದ್ದಕ್ಕೆ ಚಾಲಕನಿಗೆ ವ್ಯಕ್ತಿಯಿಂದ ಚಪ್ಪಲಿಯೇಟು!

maski
01/05/2022

ರಾಯಚೂರು:  ಮೈಮೇಲೆ ಕೆಸರು ಹಾರಿತು ಎಂದು ಆಕ್ರೋಶಗೊಂಡ ವ್ಯಕ್ತಿಯೋರ್ವ  ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ರಾಯಚೂರಿನಲ್ಲಿ ನಡೆದಿದ್ದು,  ನನ್ನ ಮೈಯೆಲ್ಲ ಕೆಸರು ಹಾರಿಸಿದ್ದಿ ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆನ್ನಲಾಗಿದೆ.

ರಾಯಚೂರಿನ ಮಸ್ಕಿ ತಾಲೂಕಿನ ಪರಸಾಪುರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಬಸ್ ಚಾಲಕ ಕೆಸರಿದ್ದ ರಸ್ತೆಯ ಮೇಲೆ ಬಸ್ ಚಲಾಯಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಪಿ.ಗೌಡ ಎಂಬವರ ಮೇಲೆ ಕೆಸರು ಹಾರಿದೆ. ಇದರಿಂದ ಆಕ್ರೋಶಗೊಂಡ ಗೌಡ, ಗಲಾಟೆ ಮಾಡಿದ್ದು, ಮಾತಿಗೆ ಮಾತು ಬೆಳೆದು ಚಾಲಕನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆನ್ನಲಾಗಿದೆ.

ಘಟನೆಯ ಸಂಬಂಧ ಬಸ್ ಚಾಲಕ ಮಸ್ಕಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದು, ಆದರೆ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ರಾಜಿ ಮಾಡಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಅವಘಡ: ಸ್ವಲ್ಪ ತಡವಾಗಿದ್ದರೆ ನಡೆಯುತ್ತಿತ್ತು ಭಾರೀ ದುರಂತ!

ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಶಾಕಿಂಗ್ ನ್ಯೂಸ್!

ಪರೋಟ ಸೇವಿಸಿದ ಬಾಲಕನ ದಾರುಣ ಸಾವು: ಪೋಷಕರಿಗೆ ಕಾದಿತ್ತು ಶಾಕಿಂಗ್ ನ್ಯೂಸ್!

ಕೋಟ್ಯಂತರ ರೂಪಾಯಿಯ ಪಾನ್ ಮಸಾಲ ಜಾಹೀರಾತಿನ ಆಫರ್ ನಿರಾಕರಿಸಿದ ಯಶ್!

ಇತ್ತೀಚಿನ ಸುದ್ದಿ

Exit mobile version