5:37 PM Wednesday 15 - October 2025

ಕ್ಯಾಂಡಲ್ ಹಚ್ಚುವ ವೇಳೆ ಸ್ಕರ್ಟ್‌ ಗೆ ಬೆಂಕಿ ತಗುಲಿ ವಿದ್ಯಾರ್ಥಿನಿ  ಸಾವು

meya
03/05/2022

ಕೊಲ್ಲಂ: ಮೇಣದ ಬತ್ತಿ ಹಚ್ಚುವ ವೇಳೆ ಸ್ಕರ್ಟ್‌ ಗೆ ಬೆಂಕಿ ತಗುಲಿ ಗಂಭೀರ ಸುಟ್ಟಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಸಾವನಪ್ಪಿರುವ ಘಟನೆ ನಡೆದಿದೆ.

ತನಲ್ ವೀಟಿಲ್ ಅನಿಲ್‌ ಮತ್ತು ಲೀನಾ ದಂಪತಿಯ ಏಕೈಕ ಪುತ್ರಿ ಮಿಯಾ (17) ಮೃತ ಬಾಲಕಿ ಎಂದು ಗುರುತಿಸಲಾಗಿದೆ.ಏಪ್ರಿಲ್ 14 ರಂದು ಮನೆಯಲ್ಲಿ ಕರೆಂಟ್ ಹೋಗಿದ್ದ ವೇಳೆ ವಿಯಾ ಕ್ಯಾಂಡಲ್ ಹಚ್ಚಲು ಯತ್ನಿಸಿದಾಗ ಆಕಸ್ಮಿಕವಾಗಿ ಸ್ಕರ್ಟ್ ಗೆ ಬೆಂಕಿ ಹೊತ್ತಿಕೊಂಡಿದೆ. ಟಿನ್ನರ್ ಒರೆಸಿ ಬದಿಯಲ್ಲಿ ಇಟ್ಟಿದ್ದ ಡ್ರೆಸ್ ನ್ನು ಬಾಲಕಿ ಧರಿಸಿದ್ದರಿಂದ ಬೆಂಕಿ ಬೇಗನೆ ಹಚ್ಚಿಕೊಂಡಿದೆ ಎಂದು ತಿಳಿದು ಬಂದಿದೆ. ಇದರಿಂದ ದೇಹದಲ್ಲಿ ಏಕಾಏಕಿ ಬೆಂಕಿ  ಹೊತ್ತಿಕೊಂಡಿದೆ ಎನ್ನಲಾಗಿದೆ

ಘಟನೆಯಲ್ಲಿ ಗಂಬೀರ ಗಾಯಗೊಂಡ ಬಾಲಕಿಯನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಮೃತಪಟ್ಟಿದ್ದಾಳೆ.

ಮೃತ ಬಾಲಕಿಯ ತಂದೆ ಮೊದಲೇ ಸಾವನ್ನಪ್ಪಿದ್ದು ತಾಯಿ ಮತ್ತು ಮಗಳು ಇಬ್ಬರೇ ಮನೆಯಲ್ಲಿ ವಾಸವಿದ್ದರು.ತಾಯಿಗೆ ಏಕೈಕ ಆಸರೆಯಾಗಿದ್ದ ಮಗಳನ್ನು ಕಳೆದುಕೊಂಡು ತಾಯಿ ಕಂಗಾಲಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಮಿತ್ ಶಾಗೆ  ಝೀರೋ ಟ್ರಾಫಿಕ್: ಹಾರ್ನ್ ಮೊಳಗಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿನಿಯ ತಲೆಗೆ ಬಿದ್ದ ಸೀಲಿಂಗ್ ಫ್ಯಾನ್!

ನೈಟ್ ಕ್ಲಬ್ ನಲ್ಲಿ ರಾಹುಲ್ ಗಾಂಧಿ?:  ಏನಿದು ವೈರಲ್ ವಿಡಿಯೋ?

ಟೋಲ್ ಸಂಗ್ರಹ: ಫಾಸ್ಟ್ ಟ್ಯಾಗ್ ವ್ಯವಸ್ಥೆ ಶೀಘ್ರವೇ ರದ್ದು!

ವಿವಾಹ ವಾರ್ಷಿಕೋತ್ಸವದಂದೇ ಅಪಘಾತದಲ್ಲಿ ಕಾನ್ ಸ್ಟೇಬಲ್ ಸಾವು

 

ಇತ್ತೀಚಿನ ಸುದ್ದಿ

Exit mobile version