3:19 PM Saturday 17 - January 2026

ಕೊರೊನಾದಿಂದಾಗಿ ಪತ್ನಿಗೆ ಕಿಸ್ ಮಾಡಲೂ ಭಯ, ಅಪ್ಪಿಕೊಳ್ಳಲೂ ಭಯ | ಸತ್ಯ ಹೇಳಿದ ಮಾಜಿ ಸಿಎಂ

18/01/2021

ಶ್ರೀನಗರ: ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೊರೊನಾ ಸಂಕಷ್ಟವನ್ನು ವಿವರಿಸುತ್ತಾ, ಇಡೀ ಸಭಿಕರನ್ನು ನಗಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾದ ಬಳಿಕ ನನ್ನ ಪತ್ನಿಕೆ ಕಿಸ್ ಕೊಡೋದಕ್ಕೂ ಆಗಿಲ್ಲ ಎಂಬ ಸತ್ಯವನ್ನು ತೆರೆದಿಟ್ಟಿದ್ದಾರೆ.

ಕೊರೊನಾದ ಹಾವಳಿಯಿಂದಾಗಿ ಪತ್ನಿಗೆ ಕಿಸ್ ಕೊಡಲೂ ಸಾಧ್ಯವಾಗಿಲ್ಲ, ಯಾರಿಗೆ ಗೊತ್ತು ಏನಾಗುತ್ತೆ ಅಂತ. ಮನಸ್ಸು ಪತ್ನಿಯನ್ನು ಅಪ್ಪಿಕೊಳ್ಳಬೇಕು ಎಂದು ಹೇಳಿದರೂ ಹಾಗೆ ಮಾಡುವಂತಿಲ್ಲ. ಈ ವಿಚಾರದಲ್ಲಿ ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.

ನಾನು ಯಾವುದಾದರೂ ಸಮಾರಂಭದಲ್ಲಿ ಮಾಸ್ಕ್ ಧರಿಸದೇ ಇರುವ ಫೋಟೋವನ್ನು ನನ್ನ ಮಗಳು ನೋಡಿದರೆ, ಮನೆಗೆ ಹೋದ ಬಳಿಕ ನನ್ನನ್ನು ವಿಚಾರಣೆ ನಡೆಸುತ್ತಾಳೆ ಎಂದು ಅವರು, ಕೊರೊನಾ ಕಾಲದ ಸಂಕಷ್ಟವನ್ನು ವಿವರಿಸಿದರು.

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದೆ. ಈ ಲಸಿಕೆ ಎಷ್ಟು ಪರಿಣಾಮಕಾರಿ ಎನ್ನುವುದನ್ನು ಕಾಲವೇ ಹೇಳಬೇಕಿದೆ. ಈ ಲಸಿಕೆಯು ಯಶಸ್ವಿಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅಬ್ದುಲ್ಲಾ ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version