ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಕಾರು: ನಾಲ್ವರ ದಾರುಣ ಸಾವು

26/01/2024
ಬಾಗಲಕೋಟೆ: ಟ್ರ್ಯಾಕ್ಟರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತುಂಬರಮಟ್ಟಿ ಕ್ರಾಸ್ ಬಳಿಯಲ್ಲಿ ನಡೆದಿದೆ.
ಮಲ್ಲು ಪೂಜಾರಿ(24), ಕಲ್ಲಪ್ಪ ಕೌಟಗಿ(34), ಕಾಮಾಕ್ಷಿ ಬಡಿಗೇರ(35), ತುಕಾರಾಮ್ ತಳೇವಾಡ(30) ಮೃತಪಟ್ಟವರಾಗಿದ್ದಾರೆ.
ಹುಬ್ಬಳ್ಳಿ ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗ್ಗಿನ ಜಾವ 4 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ.
ಮೃತಪಟ್ಟವರೆಲ್ಲರೂ ವಿಜಯಪುರ ಜಿಲ್ಲೆಯ ಹೊನಗನಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ. ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.