5:58 AM Wednesday 15 - October 2025

ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಲಾರಿ: 6 ಮಂದಿ ಸಾವು, ಇಬ್ಬರಿಗೆ ಗಂಭೀರ ಗಾಯ

bhopal
10/09/2021

ಭೋಪಾಲ್: ಭೀಕರ ರಸ್ತೆ ಅಪಘಾತವೊಂದರಲ್ಲಿ 6 ಜನರು ದಾರುಣವಾಗಿ ಸಾವನ್ನಪ್ಪಿ 2 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ನಡೆದಿದ್ದು, ಕಾರಿಗೆ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

 

ಮೃತಪಟ್ಟವರೆಲ್ಲ ಮಹಾರಾಷ್ಟ್ರದ ನಾಗ್ಪುರ ನಿವಾಸಿಗಳಾಗಿದ್ದಾರೆಂದು ತಿಳಿದು ಬಂದಿದ್ದು, ಈ ಪೈಕಿ ಇಬ್ಬರು 14 ಹಾಗೂ 15 ವರ್ಷ ವಯಸ್ಸಿನವರಾಗಿದ್ದು, ಓರ್ವ ಮಹಿಳೆಯಾಗಿದ್ದಾರೆ ಎಂದು ನಗರ ಸಂಚಾರ ಪೊಲೀಸ್ ಉಪ ಅಧೀಕ್ಷಕ ಸುದೇಶ್ ಸಿಂಗ್ ಹೇಳಿದ್ದಾರೆ.

 

ಕಾರಿನಲ್ಲಿದ್ದವರು ಛಿಂದ್ವಾರಾ ಜಿಲ್ಲೆಯ ಉಮ್ರತ್ ಹಳ್ಳಿಯ ಕಡೆಗೆ ಹೋಗುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಇಲ್ಲಿನ ರಿಂಗ್ ರೋಡ್ ಬಳಿಯಲ್ಲಿ ಲಾರಿಯೊಂದು ಅತೀ ವೇಗದಿಂದ ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ.

 

ಕಾರಿಗೆ ಡಿಕ್ಕಿ ಹೊಡೆದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಸದ್ಯ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

ಇನ್ನಷ್ಟು ಸುದ್ದಿಗಳು…

ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು, ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ: ವ್ಯಾಪಕ ಆಕ್ರೋಶ

ಪೊಲೀಸರ ಎದುರೇ ಬೆತ್ತಲಾಗಿ ಗಾಲ್ಫ್ ಕಾರ್ಟ್ ಓಡಿಸಿ ಶಾಕ್ ನೀಡಿದ ಯುವತಿ!

ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ

ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ

ಸಹೋದರಿಗೆ ಬಾಗಿನ ನೀಡಿ ಪುತ್ರಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಸಹೋದರ, ಪುತ್ರಿ ಇಬ್ಬರೂ ಅಪಘಾತಕ್ಕೆ ಬಲಿ

 

ಯಡಿಯೂರಪ್ಪನವರನ್ನು ಕೆಳಗಿಳಿಸಿದ ಫಲವನ್ನು ಇವರೆಲ್ಲ ಉಣ್ಣುತ್ತಾರೆ ನೋಡಿ | ಕೋಡಿ ಶ್ರೀಗಳಿಂದ ಸಸ್ಪೆನ್ಸ್, ಥ್ರಿಲ್ಲರ್ ಭವಿಷ್ಯ!

 

 

ಇತ್ತೀಚಿನ ಸುದ್ದಿ

Exit mobile version