ಹನೂರು: ಅಕ್ರಮ ಮದ್ಯ ಸಾಗಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸಾಗಣೆಗೆ ಬಳಸಿದ ವಾಹನವನ್ನು ವಶಕ್ಕೆ ಪಡೆಯುವಲ್ಲಿ ಹನೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಸೀಗಪ್ಪ(28) ಬಂಧಿತ ಆರೋಪಿಯಾಗಿದ್ದಾನೆ. ಘಟನೆ ವಿವರ: ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಿಂದ ತೋಮಿಯರ್ ಪಾಳ್ಯ ಗ್ರಾಮದ ಕಡೆ ಅಕ್ರಮ ಮದ್ಯ ಸಾಗಾಟ ಮಾಡು...
ಕೊಳ್ಳೇಗಾಲ: ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬೆಂಗಳೂರು ವಿಜಯನಗರ ಬಡಾವಣೆಯ ಅರುಣ್ ಕುಮಾರ್(26), ನಾಯಂಡಳ್ಳಿಯ ಆನಂದ(46) ಹಾಗೂ ತುಮಕೂರು ಜಿಲ್ಲೆಯ ಸೋಮೇಶ್ವರಪುರಂನ ತ್ರಬುದುಲ್ ಮುನಾಫ್(52) ಬಂಧಿತ ಆರೋಪಿಗಳು. ಇವರಿಂದ ಸುಮಾರು 284 ಕೆಜಿ 14 ತುಂಡ...
ಹನೂರು: ಜಮೀನಿನ ಇಂಗು ಗುಂಡಿಯಲ್ಲಿ ಅಕ್ರಮ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಹನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಅಂಡೆ ಕುರುಬನ ದೊಡ್ಡಿ ಗ್ರಾಮದ ಗುರುಸ್ವಾಮಿ (50) ಬಂಧಿತ ಆರೋಪಿಯಾಗಿದ್ದಾನೆ. ಘಟನೆಯ ವಿವರ: ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಂಡೆ ಕುರುಬನ ದೊಡ್ಡಿ ಗ್ರಾಮದ ಗುರುಸ್ವಾಮಿ ತನ...
ಸಮುದ್ರ ವಿಹಾರಕ್ಕೆ ಬಂದ ವೇಳೆ ಸಮುದ್ರದ ಭಾರೀ ಗಾತ್ರದ ಅಲೆಗಳ ನಡುವೆ ಸಿಲುಕಿ ಪ್ರಾಣಾಪಾಯದಲ್ಲಿದ್ದ ಬೆಂಗಳೂರು ಮೂಲದ ಯುವಕನನ್ನು ಮಂಗಳೂರು ನಗರದ ಮೊಗವೀರಪಟ್ನದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ರಕ್ಷಿಸಿರುವ ಘಟನೆ ಇಂದು ಉಳ್ಳಾಲ ಬೀಚ್ ನಲ್ಲಿ ನಡೆದಿದೆ. ಬೆಂಗಳೂರು ಯಶವಂತಪುರ ನಿವಾಸಿ ನಿಝಾಮ್ (35) ಎಂಬಾತನನ್ನು ರಕ್ಷಿಸಲಾಗಿದೆ. ಈತನನ...
ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಹೋಟೆಲ್ ರೂಂನಲ್ಲಿ 20 ದಿನಗಳ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಲ್ಲಿ ನಡೆದಿದೆ. ಸಂತ್ರಸ್ತ ಯುವತಿಯು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಆರೋಪಿತ ಅನೀಶ್ ರೆಹಮಾನ್ ಎಂಬಾತನ...
ಕೊಟ್ಟಿಗೆಹಾರ: ಬಣಕಲ್,ಕೊಟ್ಟಿಗೆಹಾರ, ಚಕ್ಕಮಕ್ಕಿ, ಗಬ್ಗಲ್ ಸೇರಿದಂತೆ ಹಲವೆಡೆ ಮುಸ್ಲಿಂ ಬಾಂದವರು ಮಸೀದಿಗಳಲ್ಲಿ ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ತ್ಯಾಗ ಬಲಿದಾನದ ಹಬ್ಬದ ಶುಭಾಶಯವನ್ನು ಕೋರಿದರು. ಕೊಟ್ಟಿಗೆಹಾರದ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಧರ್ಮಗುರು ಅಬ್ದುಲ್ ರೆಹಮಾನ್ ...
ಉಡುಪಿ: ಕಾಲುಸಂಕದಿಂದ ಆಕಸ್ಮಿಕವಾಗಿ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಮಠದಬೆಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ಬೈಂದೂರು ಬಿಜೂರು ನಿವಾಸಿ ಸತೀಶ್(33) ಎಂದು ಗುರುತಿಸಲಾಗಿದೆ. ಇವರುಉಡುಪಿಯ ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಇಂದು ಮಧ್ಯ...
ಚಾಮರಾಜನಗರ: ಅತೀವ ಆಸಕ್ತಿ, ಶ್ರದ್ಧೆ ಇದ್ದರೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ಖಗೋಲ ಪ್ರೇಮಿ ಯುವಕನೇ ನಿದರ್ಶನ. ಪುಸ್ತಕ ಸಹಾಯದಿಂದ ಸ್ವತಃ ಟೆಲಿಸ್ಕೋಪ್ ನ್ನು ತಯಾರಿಸಿ ಖಗೋಲ ವೀಕ್ಷಣೆ ಮಾಡುತ್ತಿದ್ದಾರೆ. ಹೌದು..., ಚಾಮರಾಜನಗರದ ಡಿಪ್ಲೊಮ ಪದವೀಧರ ಭರತ್(29 ವರ್ಷ) ಎಂಬವರು ದುಬಾರಿ ಟೆಲಿಸ್ಕೋಪ್ ಕೊಳ್ಳಲು ಆರ್ಥಿಕ ಶಕ್ತಿ ಇ...
ಬೆಂಗಳೂರಿನ ಗಿರಿನಗರ ಪೊಲೀಸರಿಂದ ಅಂತರಾಜ್ಯ ಗಾಂಜಾ ಮಾರಾಟಗಾರರ ಬಂಧನವಾಗಿದ್ದು ಸುಮಾರು 95 ಕೆ.ಜಿ. 400 ಗ್ರಾಂ ತೂಕದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕಳೆದ ಜೂನ್ 22 ರಂದು ಗಿರಿನಗರ ಪೊಲೀಸ್ ಠಾಣೆಯ ಎನ್.ಡಿ.ಪಿ.ಎಸ್ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ಆರ...
ಮಂಗಳೂರು: ಕೇರಳ ಮೂಲದ ಉದ್ಯಮಿಯೋರ್ವರನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸೇರಿದಂತೆ 8 ಮಂದಿಯನ್ನು ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಮೂಡುಬಿದ್ರೆ ಮೂಲದ ಯುವತಿ, ಬೊಂದೇಲ್ ನ ಪ್ರೀತಮ್, ಕಿಶೋರ್, ಮುರಳಿ, ಸುಶಾಂತ್, ಅಭಿ ಎಂಬ...