ಗಂಗೊಳ್ಳಿ: ಸೌಪರ್ಣಿಕ ಹೊಳೆಯ ತೀರದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಬೈಂದೂರು ತಾಲೂಕು ಹಡವು ಗ್ರಾಮದ ಅತ್ತಿಕೋಣೆ ಎಂಬಲ್ಲಿ ಆ.1ರಂದು ಸಂಜೆ ವೇಳೆ ನಡೆದಿದೆ. ನಾಪತ್ತೆಯಾದವರನ್ನು ಹಡವು ತೆಂಕಿನ ಮನೆ ನಿವಾಸಿ ನಾರಾಯಣ ದೇವಾಡಿಗ(55) ಎಂದು ಗುರುತಿಸಲಾಗ...
ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಅರ್ತಲ್ಕೆ ನಿವಾಸಿ ಸೇಸಪ್ಪ ಮುಗೇರ ಎಂಬವರ ಹಟ್ಟಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಆ.2 ರಂದು ನಡೆದಿದೆ. ಬೆಂಕಿ ಆವರಿಸಿದ ಪರಿಣಾಮ ಮೇಲ್ಛಾವಣಿ ಸುಟ್ಟು ಹೋಗಿ, ದನ ಕರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಮನೆಯವರು ರಾತ್ರಿ ವೇಳೆ ಮಲಗಿದ್ದ ಸಂದರ್ಭದಲ್ಲಿ ಹಟ್ಟಿಗೆ ಆಕಸ್...
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇನ್ನೂ 2 ದಿನಗಳ ಕಾಲ (ಆಗಸ್ಟ್ 3 ಮತ್ತು 4ರಂದು) ರಾತ್ರಿ ನಿರ್ಬಂಧವನ್ನು ವಿಸ್ತರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 5ರ ಬೆಳಗ್ಗೆ 6 ರವರೆಗೆ ನಿರ್ಬಂಧ ಮುಂದುವರಿಯಲಿದೆ. ಇತ್ತೀಚಿಗೆ ಬೆಳ್ಳಾರೆ ಮತ್...
ದಕ್ಷಿಣ ಕನ್ನಡ: ರಾಜ್ಯದಲ್ಲಿ ಶೀಘ್ರವೇ ಕೇಸರಿ ಒಕ್ಕೂಟ ಅಸ್ತಿತ್ವಕ್ಕೆ ಬರಲಿದೆ. ಈ ಒಕ್ಕೂಟದ ಅಡಿಯಲ್ಲಿ ಮುಂದಿನ ವಿಧಾನಸಭೆಯಲ್ಲಿ ನಾವು ಸ್ಪರ್ಧಿಸ್ತೀವಿ ಅಂತ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ. ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ...
ಬೈಂದೂರು: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಯಿಂದಾಗಿ ಬೈಂದೂರು ತಾಲೂಕಿನ ವಿವಿಧೆಡೆ ನೆರೆ ಸೃಷ್ಠಿಯಾಗಿದ್ದು, ಇದರಿಂದ ಹಲವು ಮನೆಗಳು ಜಲಾವೃತಗೊಂಡಿವೆ. ಹಲವು ದೋಣಿಗಳು ಕೊಚ್ಚಿ ಕೊಂಡು ಹೋಗಿ ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಶಿರೂರು ಪೇಟೆ, ಅಡವಿನಕೋಣೆ, ಕಳಿಹಿತ್ಲು ಸೇರಿದಂತೆ ಹಲವು ಪ್ರದೇಶ ಗಳು ಜಲಾವೃತ...
ಮಂಗಳೂರು: ಸುರತ್ಕಲ್ ನಲ್ಲಿ ಜುಲೈ 28ರಂದು ಭೀಕರವಾಗಿ ಕೊಲೆಗೀಡಾದ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿ, ಕುಳಾಯಿಯ ಮೋಹನ್ ಅಲಿಯಾಸ್ ನೇಪಾಲಿ ಮೋಹನ್, ಮೋಹನ್ ಸಿಂಗ್, ಗಿರಿಧರ್, ಸುರತ್ಕಲ್ ನ ಅಭಿಷೇಕ್ ಶ್ರೀನಿವಾಸ್, ದೀಕ್ಷಿತ್ ಎಂದು ಗ...
ಉಡುಪಿಯ ಪ್ರಖ್ಯಾತ ವಕೀಲ, ಬಿಲ್ಲವ ಮುಖಂಡ, ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಅಧ್ಯಕ್ಷರು ಆದ ಸಂಕಪ್ಪ.ಎ ಅವರು ಮಾಜಿ ಸಿಎಂ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಗೆ ಸೇರ್ಪಡೆಗೊಂಡರು. ಆಗಸ್ಟ್ 1 ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶಾಲು ಹೊದಿಸಿ, ಪಕ್ಷದ ಧ್ವಜ ನೀಡುವ ಮೂಲಕ ಜಾತ್ಯತೀತ ಜನತಾದಳ ಪಕ...
ಬೆಳ್ತಂಗಡಿ : ತಾಲೂಕಿನ ಬೆಳಾಲು ಗ್ರಾಮದ ತಾರಗಂಡಿ ಹಿಪ್ಪ ನಿವಾಸಿ ಸಂಜೀವ ಪೂಜಾರಿ (50ವ)ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.1 ರಂದು ಮುಂಜಾನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಮೂವರು ಮಕ್ಕಳಿದ್ದರು. ಮಹಾನಾ...
ಸುಬ್ರಹ್ಮಣ್ಯ: ಭಾರೀ ಮಳೆಗೆ ಕುಕ್ಕೆ ಸುಬ್ರಹ್ಮಣ್ಯ ಅಕ್ಷರಶಃ ನಲುಗಿ ಹೋಗಿದೆ. ಮಳೆಗೆ ಆದಿಸುಬ್ರಹ್ಮಣ್ಯ ದೇವಸ್ಥಾನದ ಒಳಗೆ ನೀರು ನುಗ್ಗಿದೆ. ಮತ್ತೊಂದೆಡೆ ದರ್ಪಣ ತೀರ್ಥ ನದಿಯ ನೀರು ಸುಬ್ರಹ್ಮಣ್ಯದ ಮುಖ್ಯ ದೇವಸ್ಥಾನಕ್ಕೂ ನುಗ್ಗಿದೆ. ದೇವರಗದ್ದೆ ಹಾಗೂ ಮಾನಾಡಿನ ನದಿಗಳು ಉಕ್ಕಿ ಹರಿದು ಹಲವು ಮನೆಗಳು ಜಲಾವೃತಗೊಂಡಿದೆ. ನೂಚಿಲದ ಕೆಲವು ಮ...
ಸುಬ್ರಹ್ಮಣ್ಯ: ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಬಿದ್ದ ಪರಿಣಾಮ ಇಬ್ಬರು ಸಹೋದರಿಯರಾದ ಬಾಲಕಿಯರು ಮಣ್ಣಿನಡಿ ಸಿಲುಕಿ ಮೃತಪಟ್ಟ ಘಟನೆ ರಾತ್ರಿ ನಡೆದಿದೆ. ಪರ್ವತಮುಖಿ ನಿವಾಸಿ ಕುಸುಮಾಧರ ಎಂಬವರ ಮಕ್ಕಳಾದ 11 ವರ್ಷದ ಶ್ರುತಿ ಹಾಗೂ 6 ವರ್ಷದ ಜ್...