ತಿರುವನಂತಪುರಂ: ದೇಗುಲ ಪ್ರವೇಶದ ವೇಳೆ ಪುರುಷರು ಅಂಗಿ ತೆಗೆದು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಲ್ಲಿಸಬೇಕು ಇದು ಸಾಮಾಜಿಕ ಅನಿಷ್ಠ ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ. ನಾರಾಯಣಗುರು ಸ್ಥಾಪಿತ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ...
ಇನ್ಸ್ಟಾಗ್ರಾಮ್ನಲ್ಲಿ ತನ್ನ ಪ್ರೇಯಸಿಗೆ ಮೆಸೇಜ್ ಗಳನ್ನು ಕಳುಹಿಸಿದ್ದಕ್ಕಾಗಿ 19 ವರ್ಷದ ಯುವಕನೊಬ್ಬ ವ್ಯಕ್ತಿಯನ್ನು ಕೊಂದ ಘಟನೆ ಗುಜರಾತ್ನ ಗಾಂಧಿನಗರದಲ್ಲಿ ನಡೆದಿದೆ. ಆರೋಪಿ ರಾಹುಲ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಡಿಸೆಂಬರ್ 28ರಂದು ದಶರಥ್ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದರು. ಇದರ...
ಮಣಿಪುರದ ಕಡಂಗ್ಬಂದ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಶಂಕಿತ ಉಗ್ರರು ಅತ್ಯಾಧುನಿಕ ಬಂದೂಕುಗಳನ್ನು ಬಳಸಿ ಅನೇಕ ಸುತ್ತು ಗುಂಡು ಹಾರಿಸಿ ಬಾಂಬ್ ಗಳನ್ನು ಎಸೆದಿದ್ದಾರೆ. ಈ ದಾಳಿಯಿಂದಾಗಿ ಇಂಫಾಲ್ ಪಶ್ಚಿಮ ಜಿಲ್ಲೆಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಹಲವಾರು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಪಲಾಯನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾ...
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಆರೋಪಿ ಅರ್ಷದ್ ನನ್ನು ಬಂಧಿಸಲಾಗಿದೆ. ಐವರು ಕತ್ತರಿಸಿದ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಮತ್ತು ಅವರ ಬಟ್ಟೆಗಳು ರಕ್ತದಲ್ಲಿ ಒದ್ದೆಯಾಗಿವೆ. ಆಹಾರದಲ್ಲಿ ಮಾದಕ ದ್ರವ್ಯಗಳನ್ನು ಬೆರ...
ಶ್ರೀನಗರದಲ್ಲಿ ಈಗ ದಟ್ಟ ಮಂಜು. ತೀವ್ರ ಚಳಿ. ಆದರೆ ಈ ಚಳಿ ಮತ್ತು ಮಂಜಿನ ಸುಖವನ್ನ ಅನುಭವಿಸುವುದಕ್ಕೆ ಪ್ರವಾಸಿಗರು ಕುತೂಹಲದಿಂದ ಅಲ್ಲಿಗೆ ಧಾವಿಸುತ್ತಾರೆ. ಹೀಗೆ ಧಾವಿಸಿದವರು ಈ ಮಂಜು ಮತ್ತು ಚಳಿಗೆ ಸಿಲುಕಿ ಒದ್ದಾಡುತ್ತಾರೆ. ಇಂತಹವರಿಗೆ ಕಾಶ್ಮೀರಿಗಳು ತಮ್ಮ ಮನೆಯಲ್ಲಿ ಮತ್ತು ಮಸೀದಿಯಲ್ಲಿ ತಂಗುವುದಕ್ಕೆ ಏರ್ಪಾಡು ಮಾಡುತ್ತಿದ್ದಾರೆ. ಕಾ...
ಪ್ರಸಿದ್ಧ ಆಟೋಮೊಬೈಲ್ ಕಂಪನಿಯಾದ ಫೋರ್ಡ್ ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಸ್ರೇಲ್ ವಿರುದ್ಧ ಪೋಸ್ಟ್ ಗಳು ಕಾಣಿಸಿಕೊಂಡಿವೆ. ಇಸ್ರೇಲನ್ನು ಖಂಡಿಸಿ ಮತ್ತು ಫೆಲೆಸ್ತೀನನ್ನು ಬೆಂಬಲಿಸುವ ಹಲವು ಪೋಸ್ಟುಗಳು ಈ ಖಾತೆಯಲ್ಲಿ ಪ್ರಕಟವಾಗಿವೆ. ಇಸ್ರೇಲ್ ಭಯೋತ್ಪಾದಕ ರಾಷ್ಟ್ರವಾಗಿದ್ದು ಅದರ ಕೈಯಿಂದ ಫೆಲೆಸ್ತೀನನ್ನು ವಿಮೋಚಿಸಬೇಕಾಗಿದೆ ಎಂದು ಕರೆ ಕ...
ಕಾಲು ಮುಟ್ಟಿ ನಮಸ್ಕರಿಸುವ ಸಂಪ್ರದಾಯವನ್ನು ಮಧ್ಯಪ್ರದೇಶದ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಡಾ.ವೀರೇಂದ್ರ ಕುಮಾರ್ ಅವರು ನಿಷೇಧಿಸಿದ್ದಾರೆ. ತನ್ನ ಕ್ಷೇತ್ರದ ಕಚೇರಿಯಲ್ಲಿ ಈ ಬಗೆಯ ಸಂಪ್ರದಾಯಕ್ಕೆ ಅವರು ವಿದಾಯ ಕೋರಿದ್ದಾರೆ. ಯಾರಾದರೂ ಹಾಗೆ ನಮಸ್ಕರಿಸಿದರೆ ಅವರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ರ...
ಕೇರಳ "ಮಿನಿ ಪಾಕಿಸ್ತಾನ" ಎಂಬ ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆಯ ಹೇಳಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದಾರೆ. ಇದು ಕೇರಳದ ವಿರುದ್ಧ ದ್ವೇಷದ ಅಭಿಯಾನಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಸಂಘಪರಿವಾರದ ದ್ವೇಷಪೂರಿತ ಪ್ರಚಾರದ ವಿರುದ್ಧ ಸೆಕ್ಯುಲರ್ ಶಕ್ತಿಗಳು ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ...
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಚೋದಿಸಿದ್ದಕ್ಕಾಗಿ ಬಾಂಗ್ಲಾದೇಶದ ಪ್ರಜೆಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯ ಸೋಮವಾರ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಬಾಂಗ್ಲಾದೇಶದ ಪ್ರಜೆ ಜಾಹಿದುಲ್ ಇಸ್ಲಾಂ ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ ಇಂಡಿಯಾ (ಜೆಎಂಬಿ-ಇಂಡಿಯಾ) ಆದೇಶದ ಮ...
ಮುಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ನಾಲ್ಕು ತಿಂಗಳ ಹಿಂದೆ ಕ್ರಾಂತಿಗೆ ಕಾರಣವಾದ ತಾರತಮ್ಯ ವಿರೋಧಿ ವಿದ್ಯಾರ್ಥಿ ಚಳವಳಿಯ ಪ್ರಸ್ತಾವಿತ ಘೋಷಣೆಯಿಂದ ದೂರ ಸರಿದ ಒಂದು ದಿನದ ನಂತರ "ಜುಲೈ ದಂಗೆಯ ಘೋಷಣೆ" ಸಿದ್ಧಪಡಿಸಲು ನಿರ್ಧರಿಸಿದೆ ಎಂದು ಘೋಷಿಸಿದೆ. "ಕೆಲವೇ ದಿನಗಳಲ್ಲಿ ಎಲ್ಲರ ಭಾಗವಹಿಸುವಿಕೆ ಮತ್ತು ಒಮ್ಮತ...