23 ಕೆಜಿ ಗಾಂಜಾ ಸಾಗಿಸುತ್ತಿದ್ದ ಶ್ರೀಕಾಕುಳಂ ಜಿಲ್ಲೆಯ ಮಾಜಿ ರಣಜಿ ಕ್ರಿಕೆಟಿಗನನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮಾಜಿ ರಣಜಿ ಕ್ರಿಕೆಟಿಗನನ್ನು ಬುಡುಮೂರು ನಾಗರಾಜು ಎಂದು ಗುರುತಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಲಕ್ಷ್ಮಣರಾವ್ ಅವರು ಹೇಳಿದ್ದಾರೆ. ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿಯ ವಿಜಯಾದಿತ್ಯ ಪಾರ್ಕ್...
ರೈಲ್ವೆ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಕೆಲವು ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಆಸ್ತಿಗಳನ್ನು ವಶಕ್ಕೆ ತಗೆದುಕೊಳ್ಳಲು ಸಂಸ್ಥೆಯು ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ತಾತ್ಕಾಲಿ...
ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಪ್ರೊ.ಕೆ.ಭೈರಪ್ಪ(69) ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಬೆಳಗಾವಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ತೆರಳಲೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ತೀವ್ರ ಹೃದಯಾಘಾತಗೊಂಡು ಅವರು ಕೊನೆಯುಸಿರೆಳೆದಿದ್ದಾರೆ. ಪ್ರೊ.ಕೆ.ಭೈರ...
ಪಾಕಿಸ್ತಾನದ ಬಜೌರ್ ನಗರದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಇಸ್ಲಾಮಿಕ್ ರಾಜಕೀಯ ಪಕ್ಷದ ಸಭೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 50 ಮಂದಿ ಗಾಯಗೊಂಡಿದ್ದಾರೆ. ಬಜೌರ್ನ ಖಾರ್ನಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ ಕಾರ್ಯಕರ್ತರ ಸಮಾವೇಶದಲ್ಲಿ ಬಾಂಬ್ ಸ್ಫೋ...
ವಲಸೆ ಕಾರ್ಮಿಕನೋರ್ವ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಆರೋಪಿಯು ಬಾಲಕಿಯ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಆಲುವಾ ಸ್ಥಳೀಯ ಮಾರುಕಟ್ಟೆಯ ಹಿಂಭಾಗದಲ್ಲಿ ಬಿಸಾಡಿದ್ದಾನೆ. ಈ ಸಂಬಂಧ ಬಿಹಾರ ಮೂಲದ ಕಾರ್ಮಿಕನನ್ನು ಪೊಲೀಸರು ಬಂಧಿಸಿದ್ದಾರೆ...
ಮೈಸೂರು: ಒಡನಾಡಿ ಸಂಸ್ಥೆಯ ಸ್ಟಾನ್ಲಿ ಅವರ ಹೇಳಿಕೆಯನ್ನು ತಿರುಚಿ ಸೌಜನ್ಯ ಅತ್ಯಾಚಾರ ಪ್ರಕರಣದ ಹೋರಾಟದ ಕಾವನ್ನು ಹಳ್ಳಹಿಡಿಸಲು ವ್ಯವಸ್ಥಿತ ಪಿತೂರಿ ನಡೆದಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಟಾನ್ಲಿ ಅವರು, ವಸಂತ್ ಗಿಳಿಯಾರ್ ಎನ್ನುವಂತಹ ಒಬ್ಬ ವ್ಯಕ್ತಿ, ಒಂದು ಕೆಟ್ಟ ಸಂದೇಶವನ್ನ...
ಕೆನಡಾದ ಆಲ್ಬರ್ಟಾ ಪ್ರಾಂತ್ಯದ ಕ್ಯಾಲ್ಗರಿಯ ಪಶ್ಚಿಮದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಕೆನಡಾ ಪೊಲೀಸರು ತಿಳಿಸಿದ್ದಾರೆ. ಪೈಲಟ್ ಮತ್ತು ಐವರು ಪ್ರಯಾಣಿಕರನ್ನು ಹೊತ್ತ ವಿಮಾನವು ಶುಕ್ರವಾರ ರಾತ್ರಿ ನಗರದ ಪಶ್ಚಿಮದಲ್ಲಿರುವ ಸ್ಪ್ರಿಂಗ್ಬ್ಯಾಂಕ್ ವಿಮಾನ ನಿಲ್ದಾಣದಿಂದ ಹೊರಟು ಬ್ರಿಟಿಷ್ ಕೊಲಂಬಿಯಾದ...
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿರುವ ಹಳ್ಳಿಯೊಂದರ ಭೀರಾ ಪೊಲೀಸ್ ಠಾಣೆ ಬಳಿಯ ಲಾಲಾ ರಾಮ್ ಅವರ ಮನೆಯಲ್ಲಿ ಮೊಸಳೆಯೊಂದು ಮಂಚದಡಿಯಲ್ಲಿ ವಿರಮಿಸಿರುವ ಅಪರೂಪದ ಘಟನೆ ನಡೆದಿದೆ. ವಿಶೇಷ ಏನಪ್ಪ ಅಂದ್ರೆ ಮಂಚದಡಿಯಲ್ಲಿ ಮೊಸಳೆ ಇರುವ ಸುಳಿವೇ ಇಲ್ಲದೆ ವ್ಯಕ್ತಿಯೊಬ್ಬ ಅದೇ ಮಂಚದ ಮೇಲೆ ಗಡದ್ದಾಗಿ ನಿದ್ದೆ ಮಾಡಿದ್ದ. ರಾತ್ರಿಯೆಲ್ಲಾ ...
ಮಧ್ಯಪ್ರದೇಶದ ಇಂದೋರ್ನಲ್ಲಿ ವ್ಯಕ್ತಿಯೊಬ್ಬರು ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಆರ್ ಟಿಐ ಅಡಿ ಕೇಳಲಾದ ಮಾಹಿತಿಗೆ ಬರೋಬ್ಬರಿ 40,000 ಪುಟಗಳ ಉತ್ತರ ಪಡೆದಿದ್ದಾರೆ. ನಂತರ ಆ ದಾಖಲೆಗಳನ್ನು ಎಸ್ ಯುವಿ ಕಾರಿನಲ್ಲಿ ಮನೆಗೆ ಕೊಂಡೊಯ್ದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಔಷಧಗಳು, ಉಪಕರಣಗಳು ಮತ್ತು ಸಂಬಂಧಿತ ಸಾಮಗ...
ಮುಸ್ಲಿಂ ಸಮುದಾಯಗಳಲ್ಲಿ ತನ್ನ ಪ್ರಭಾವವನ್ನು ಬಲಪಡಿಸುವ ಪ್ರಯತ್ನದಲ್ಲಿ ಬಿಜೆಪಿ ಪಕ್ಷವು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ತಾರಿಕ್ ಮನ್ಸೂರ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಎನ್ ಆರ್ ಸಿ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಕೇಂದ್ರಗಳಲ್ಲಿ ಒಂದಾದ ಎಂಎಮ್ ಯು ಅನ್ನು ಮುನ್ನಡೆಸುವಲ್ಲಿ ಮನ್ಸೂರ...