1:38 PM Thursday 16 - October 2025

ಪ್ರಧಾನಿ ಲೈವ್ ನಲ್ಲಿರುವಾಗಲೇ ಭೂಕಂಪನ!

23/10/2020

ವಾಷಿಂಗ್ಟನ್: ನೈರುತ್ಯ ಐಸ್ಲ್ಯಾಂಡ್ ನಲ್ಲಿ 5.7 ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದ್ದು, ವಾಷಿಂಗ್ಟನ್ ಪೋಸ್ಟ್ ನ ಪ್ರಧಾನಿ ಕಾತ್ರಿನ್ಸ್ ಜಾಕೊಬ್ಸ್ ಡಾಟರ್ ಅವರು ಲೈವ್ ಸಂದರ್ಶನದಲ್ಲಿದ್ದ ಸಂದರ್ಭದಲ್ಲಿಯೇ ಭೂಕಂನ ಸಂಭವಿಸಿದೆ.

ಸುದ್ದಿವಾಹಿನಿಯೊಂದಕ್ಕೆ ಪ್ರಧಾನಿ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಏಕಾಏಕಿ ಭೂಕಂಪನ ಸಂಭವಿಸಿದೆ. ಪ್ರತಿಕ್ರಿಯೆ ನೀಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಭೂಮಿ ಕಂಪಿಸಿದೆ, ಈ ವೇಳೆ “ ಓ ಮೈ ಗಾಡ್ ಭೂಕಂಪ” ಎಂದು ಪ್ರಧಾನಿ ಕೆಲ ಕಾಲ ಆತಂಕ ವ್ಯಕ್ತಪಡಿಸುತ್ತಾರೆ. ಆ ಬಳಿಕವೂ ಅವರು ತಮ್ಮ ಮಾತನ್ನು ಮುಂದುವರಿಸುತ್ತಾರೆ.

ಕೊರೊನಾದಿಂದಾಗಿ ಐಸ್ಲ್ಯಾಂಡ್ ದೇಶದ ಪ್ರವಾಸೋದ್ಯಮದ ಮೇಲೆ ಬೀರಿರುವ ಪರಿಣಾಮದ ಬಗ್ಗೆ  ಸಂದರ್ಶನ ನಡೆಯುತ್ತಿತ್ತು. ಭೂಕಂಪ ಸಂಭವಿಸಿದರೂ, ಭಯಗೊಳ್ಳದೇ ತಮ್ಮ ಮಾತನ್ನು ಮುಂದುವರಿಸಿದ ಅವರ ಧೈರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version