10:35 AM Saturday 23 - August 2025

ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ಸೇರಿದಂತೆ ನ್ಯೂಸ್ ವೆಬ್ ಸೈಟ್ ಗಳಿಗೆ ಸಂಕಷ್ಟ? | ಕೇಂದ್ರ ಸರ್ಕಾರ ತರಲಿದೆಯೇ ಈ ಹೊಸ ನಿಯಮ!

11/11/2020

ನವದೆಹಲಿ: ಡಿಜಿಟಲ್ ವಿಷಯವನ್ನು ನಿಯಂತ್ರಿಸುವಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು,  ಒಟಿಟಿ ಫ್ಲಾಟ್ ಫಾರ್ಮ್ ಗಳಾದ ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ವಿಡಿಯೋಗಳು ಮತ್ತು ಹಾಟ್ ಸ್ಟಾರ್ ಹಾಗೂ ಆನ್ ಲೈನ್ ಸುದ್ದಿ ಸೇರಿದಂತೆ ಡಿಜಿಟಲ್ ನಿಯಂತ್ರಣಕ್ಕೆ ಮುಂದಾಗಿದೆ.

ಸುದ್ದಿ ವೆಬ್ ಸೈಟ್ ಗಳು ತಮ್ಮನ್ನು ಭಾರತದ ಪತ್ರಿಕೆಗಳ ರಿಜಿಸ್ಟಾರ್ ನಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪ್ರಸ್ತಾವಿತ ಕಾನೂನನ್ನು ಕೇಂದ್ರ ಸಚಿವ ಸಂಪುಟದ ಮುಂದಿಡಲಿದೆ ಎಂದು ವರದಿಯಾಗಿದೆ. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದರ ಹಿನ್ನೆಲೆಯಲ್ಲಿ ಆನ್ ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಕಾರ್ಯಾಚರಿಸುತ್ತಿರುವ ವೆಬ್ ಸೈಟ್ ಗಳ ಮೇಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.

ಒಟಿಟಿ ಫ್ಲಾಟ್ ಫಾರ್ಮ್ ಗಳು ಮತ್ತು ಅನಿಯಂತ್ರಿತವಾಗಿ ಲೈಂಗಿಕ ಹಾಗೂ ಅಶ್ಲೀಲ ಮತ್ತು ಕಾನೂನು ಬುದ್ಧವಾಗಿ ನಿರ್ಬಂಧಿತ ವಿಷಯಗಳ ಬಗ್ಗೆ ಆನ್ ಲೈನ್ ನಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನಿಯಂತ್ರಿಸಲು ಯಾವುದೇ ಕಾರ್ಯವಿಧಾನಗಳಿಲ್ಲ. ಹೀಗಾಗಿ ಇಂತಹದ್ದೊಂದು ಕಾರ್ಯವಿಧಾನವನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಸೋಮವಾರ ಕೋರ್ಟ್ ನಲ್ಲಿ ಇಂತಹದ್ದೊಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ  ವಿಚಾರಣೆಯ ಬಳಿಕ ವಿಡಿಯೋ ಸ್ಟ್ರೀಮಿಂಗ್ ವಿಚಾರಗಳನ್ನು ಮೇಲ್ವಿಚಾರಣೆ ಮಾಡಲು ನಿಯಂತ್ರಿಸಲು, ಯಾಂತ್ರಿಕ ವ್ಯವಸ್ಥೆ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ

Exit mobile version