1:09 AM Wednesday 10 - December 2025

ಟ್ರಾಫಿಕ್ ಜಾಮ್ ಕೇಳಿದ್ದೇವೆ… ಚಕ್ಕಾ ಜಾಮ್ ಅಂದರೆ ಏನು? | ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ

06/02/2021

ನವದೆಹಲಿ:  ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ರೈತರು ದೇಶಾದ್ಯಂತ ‘ಚಕ್ಕಾ ಜಾಮ್’ ಹಮ್ಮಿಕೊಂಡಿದ್ದಾರೆ. ರೈತ ಸಂಘಟನೆಗಳು ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಚಕ್ಕ ಜಾಮ್ ಕೂಡ ಒಂದಾಗಿದೆ. ಆದರೆ ಏನಿದು ಚಕ್ಕಾ ಚಾಮ್? ಇದರ ಅರ್ಥವೇನು ಎನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ.

ಚಕ್ಕಾ ಜಾಮ್ ಎನ್ನುವುದು ಹಿಂದಿ ಪದವಾಗಿರುವುದರಿಂದ ಇತರ ಭಾಷಿಗರಿಗೆ ಅದು ಏನು ಎನ್ನುವುದು ಸುಲಭವಾಗಿ ಅರ್ಥವಾಗಿಲ್ಲ. ನಮಗೆ ಟ್ರಾಫಿಕ್ ಜಾಮ್ ಗೊತ್ತು. ಆದ್ರೆ, ಚಕ್ಕಾ ಜಾಮ್ ಎಂದರೆ ಏನು ಎನ್ನುವುದು ಗೊತ್ತಿಲ್ಲ ಎಂದು ಬಹುತೇಕರು ಹೇಳುತ್ತಿದ್ದಾರೆ.

ಹಿಂದಿ ಹಾಗೂ ಇಂಗ್ಲಿಷ್ ಪದ ಬಳಕೆ ಮಾಡಿ ಈ ‘ಚಕ್ಕಾ ಜಾಮ್’ ಎಂಬ ಪದವನ್ನು ರೈತರು ಘೋಷಿಸಿದ್ದಾರೆ. ಚಕ್ಕಾ ಎಂದರೆ, ಚಕ್ರ ಎಂದರ್ಥ. ಇದು ಹಿಂದಿ ಪದವಾಗಿದೆ. ಜಾಮ್ ಎಂದರೆ, ತಡೆಹಿಡಿಯುವುದು, ಬಂದ್ ಮಾಡುವುದು ಎಂದರ್ಥ ಹಾಗಾಗಿ ಚಕ್ಕಾ ಜಾಮ್ ಎಂದರೆ, ಚಕ್ರಗಳನ್ನು ತಡೆಹಿಡಿಯುವುದು. ಅಂದರೆ ವಾಹನ ಸಂಚಾರ ತಡೆಯುವುದು ಎಂದರ್ಥ.

ಇನ್ನೂ  ಟ್ವಿಟ್ಟರ್ ನಲ್ಲಿ ಕೂಡ “ಚಕ್ಕಾ ಜಾಮ್” ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, 5ನೇ ಸ್ಥಾನದಲ್ಲಿದೆ.  ಇಲ್ಲಿಯವರೆಗೆ ಚಕ್ಕಾ ಜಾಮ್ ಹ್ಯಾಶ್ ಟ್ಯಾಗ್ ನಲ್ಲಿ  56.1 ಸಾವಿರ ರಿಟ್ವೀಟ್ ಗಳೂ ಆಗಿವೆ.

ಇತ್ತೀಚಿನ ಸುದ್ದಿ

Exit mobile version