ಮಸೀದಿ ಕಟ್ಟಿಸಿದ್ದು ಕಾಂಗ್ರೆಸ್ ನವರು , ನೀವ್ಯಾಕೆ ಇಲ್ಲಿ ಪ್ರಚಾರ ಮಾಡ್ತೀರಿ?: ಜೆಡಿಎಸ್ ಅಭ್ಯರ್ಥಿ ಮೇಲೆ ಹಲ್ಲೆಗೆ ಯತ್ನ

jds
05/05/2023

ಚಾಮರಾಜಪೇಟೆ: ಜೆಡಿಎಸ್ ಅಭ್ಯರ್ಥಿ ಸಿ. ಗೋವಿಂದರಾಜು ಅವರ ಮೇಲೆ ಚುನಾವಣಾ ಪ್ರಚಾರದ  ವೇಳೆ ಕೆಲವರು ಹಲ್ಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದೆ.

ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಸಿ. ಗೋವಿಂದರಾಜು ಶುಕ್ರವಾರ ಪ್ರಚಾರಕ್ಕೆ ತೆರಳಿದ್ದರು. ಅವರ ಕಾರ್ಯಕರ್ತರು ಹಾಗೂ ಬೆಂಬಲಿಗರು ಕರಪತ್ರ ಹಂಚುತ್ತಾ ತೆರಳುತ್ತಿದ್ದ ವೇಳೆ  ಮಸೀದಿ ಬಳಿಯಲ್ಲಿ ಅವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

ಮಸೀದಿ ಕಟ್ಟಿಸಿದ್ದು ಕಾಂಗ್ರೆಸ್ ನವರು, ನೀವ್ಯಾಕೆ ಇಲ್ಲಿ ಪ್ರಚಾರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಕೆಲವರು  ಅಭ್ಯರ್ಥಿ ಗೋವಿಂದರಾಜು ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜು ಅವರು ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version