3:27 AM Saturday 18 - October 2025

ತಂಪು ಪಾನೀಯ ಮಾರಾಟ ಮಾಡಿ ತನ್ನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸುತ್ತಿರುವ ಬಾಲಕಿ

05/03/2021

ಬರ್ಮಿಂಗ್ ಹ್ಯಾಮ್ : 7 ವರ್ಷದ ಲಿಜಾ ಸ್ಕೋಟ್ ಎಂಬ ಬುದ್ಧಿವಂತ ಬಾಲಕಿ ಕಳೆದ ವರ್ಷ ಬರ್ಮಿಂಗ್ ಹ್ಯಾಮ್ ನ ಉಪನಗರವೊಂದರಲ್ಲಿ ಬೇಕರಿ ಸಮೀಪ ತಂಪು ಪಾನೀಯ ಮಾರಾಟ ಮಾಡುವ ಮೂಲಕ ಸುದ್ದಿಯಲ್ಲಿದ್ದಳು. ಆದರೆ ಅವಳು ಮತ್ತೊಮ್ಮೆ ವಿಶ್ವದ ಗಮನ ಸೆಳೆದಿದ್ದಾಳೆ.

ಕಳೆದ ವರ್ಷದ ಲಿಜಾ ಸ್ಕೋಟ್, ತಾನು ಆಟಿಕೆ, ಶೂಗಳನ್ನು ಕೊಂಡುಕೊಳ್ಳಲು ಬೇಕರಿ ಸಮೀಪ ನಿಂಬು ಪಾನೀಯವನ್ನು ಮಾರಾಟ ಮಾಡುತ್ತಿದ್ದಳು.  ಆದರೆ ಇದೀಗ ಲಿಜಾಗೆ ಮೆದುಳು ಸಂಬಂಧಿತ ಕಾಯಿಲೆಯೊಂದು ಆವರಿಸಿದ್ದು, ವೈದ್ಯರ ಸಲಹೆಯಂತೆಯ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಬೇಕಿದೆ.

ಇಲ್ಲಿಯವರೆಗೆ ತನ್ನ ಆಟಿಕೆಗಳಿಗಾಗಿ ದುಡಿದು ಹಣಗಳಿಸುತ್ತಿದ್ದ ಲಿಜಾ ಇದೀಗ  ತನ್ನ  ಮೆದುಳಿನ ಗಂಭೀರ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ನಡೆಸಲು ಹಣ ಹೊಂದಿಸಲು ದುಡಿಯುತ್ತಿದ್ದಾಳೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಲಿಜಾಳ ತಾಯಿ ಎಲಿಜಬೆತ್,  ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ಯಾವಾಗಲೂ ಯೋಚಿಸುತ್ತಿದ್ದ ತನ್ನ ಮಗಳು ಲಿಜಾ ಇದೀಗ ತನ್ನ ಶಸ್ತ್ರ ಚಿಕಿತ್ಸೆಗೆ ಹಣ ಹೊಂದಿಸಲು ದುಡಿಯುವಂತಾಗಿದೆ ಎಂದು ಹೇಳಿದ್ದಾರೆ.

ಲಿಜಾಗೆ ತಂದೆ ಇಲ್ಲ.  ಆಕೆಯ ಬಗ್ಗೆ ನಾನು ಕಾಳಜಿ ವಹಿಸಬಲ್ಲೆ. ಆದರೆ, ಲಿಜಾ ತನ್ನ ಸ್ವಂತ ದುಡಿಮೆಯಿಂದಲೇ 12 ಸಾವಿರ ಡಾಲರ್ ಗಳಿಸಿದ್ದಾಳೆ. ಲಿಜಾಳ ವೈದ್ಯಕೀಯ ಸ್ಥಿತಿ ಅರಿತ ನಾಗರಿಕರು ಆಕೆಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದೂ ಎಲಿಜಬೆತ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version