4:10 PM Wednesday 15 - October 2025

ಮೊದಲ ಬಾರಿಗೆ ಭಾರತದಿಂದ ಅಕ್ಕಿ ಆಮದು ಮಾಡಿಕೊಂಡ ಚೀನಾ

02/12/2020

ಮೂರು ದಶಕಗಳಲ್ಲೇ ಮೊದಲ ಬಾರಿಗೆ ಚೀನಾ ದೇಶವು ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿದ್ದು, ಭಾರತದಿಂದ ಚೀನಾವು ಭಾರೀ ರಿಯಾಯಿತಿ ದರದಲ್ಲಿ ಅಕ್ಕಿಯನ್ನು ಆಮದು ಮಾಡಿಕೊಳ್ಳಲು ಆರಂಭಿಸಿದೆ.

ಭಾರತ ವಿಶ್ವದ ಅತೀ ದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದ್ದರೆ, ಚೀನಾವು ಅತೀ ಹೆಚ್ಚು ಅಕ್ಕಿ ಆಮದು ದೇಶವಾಗಿದೆ. ಚೀನಾವು ವಾರ್ಷಿಕವಾಗಿ ಸುಮಾರು 4 ಮಿಲಿಯನ್ ಟನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ.


ಭಾರತ-ಚೀನಾ ನಡುವೆ ಹಿಮಾಲಯದ ಗಡಿ ವಿವಾದ ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿಯೇ ಚೀನಾವು ಭಾರತದಿಂದ ಅಕ್ಕಿ ಆಮದಿಗೆ ಮುಂದಾಗಿದೆ. ಇದೀಗ ಮೊದಲ ಬಾರಿಗೆ ಚೀನಾ ಭಾರತದಿಂದ ಅಕ್ಕಿ ಆಮದು ಮಾಡಿಕೊಂಡಿದ್ದು, ಅಕ್ಕಿಯ ಗುಣಮಟ್ಟ ಗಮನಿಸಿದ ಬಳಿಕ ಅವುಗಳ ಖರೀದಿಯನ್ನು ಹೆಚ್ಚಿಸಬಹುದು ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ.ವಿ.ಕೃಷ್ಣರಾವ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version