5:56 PM Thursday 16 - October 2025

ಕಾಲೇಜಿನಲ್ಲಿ ಟೋಪಿ ಧರಿಸಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿಗೆ ಥಳಿತ

muslim hats
30/05/2022

ಬಾಗಲಕೋಟೆ: ಕಾಲೇಜ್ ಆವರಣದಲ್ಲಿ ಟೋಪಿ ಧರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ತೆರದಾಳ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ಏಳು ಜನರ ವಿರುದ್ಧ ಕೇಸ್ ದಾಖಲಾಗಿದೆ.

ತೆರೆದಾಳ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನ 19 ವರ್ಷದ ವಿದ್ಯಾರ್ಥಿ ನವೀದ್ ಹಸನಾಸಾಬ್ ತರಾತರಿ ನೀಡಿದ್ದ ದೂರಿನ ಆಧಾರದ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ಸಬ್ ಇನ್ಸ್ ಪೆಕ್ಟರ್ ಮತ್ತಿತರ ಐವರು ಪೊಲೀಸರ ವಿರುದ್ಧ ಮೇ 24 ರಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಎಫ್ ಐಆರ್ ಪ್ರಕಾರ, ಈ ವರ್ಷದ ಫೆಬ್ರವರಿಯಲ್ಲಿ ಈ ಘಟನೆ ನಡೆದಿದೆ.

ಕಾಲೇಜ್ ಒಳಗಡೆ ಟೋಫಿ ಧರಿಸುವುದಕ್ಕೆ ಸರ್ಕಾರದ ಆದೇಶವಿಲ್ಲದಿದ್ದರೂ ಟೋಫಿ ಧರಿಸಿ ಕಾಲೇಜ್ ಗೆ ಹೋಗಿದ್ದಕ್ಕೆ ಪ್ರಿನ್ಸಿಪಾಲ್ ಪ್ರವೇಶ ನೀಡಲಿಲ್ಲ ಹಲ್ಲೆಗೊಳಗಾದ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾನೆ.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೂಡಾ ತನ್ನ ಮೇಲೆ ಹಲ್ಲೆ ನಡೆಸಿ, ತನ್ನ ನಂಬಿಕೆಯನ್ನು ಅಪಮಾನಿಸಿದ್ದಾನೆ ಎಂದು ಆರೋಪಿಸಿದ್ದಾನೆ. ಈ ವಿಚಾರದ ಬಗ್ಗೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದೇಶದಲ್ಲಿ ನಡೆಯುತ್ತಿರುವ ಕೋಮುಪ್ರೇರಿತ ಗಲಭೆ, ಗಲಾಟೆಗೆ ಆರೆಸ್ಸೆಸ್ ಕಾರಣ: ಶಾಸಕ ಅಮರೇಗೌಡ ಬಯ್ಯಾಪುರ

ಕಾಂಗ್ರೆಸ್ ಕಮ್ಯುನಿಸ್ಟರನ್ನು ಕೆರಳಿಸಿದ ಎಸ್ ಡಿಪಿಐ ಮುಖಂಡ ಇಲ್ಯಾಸ್ ಹೇಳಿಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿರ್ಮಾಪಕ ಭಾ.ಮಾ.ಹರೀಶ್ ಆಯ್ಕೆ

ನಾಲ್ವರು ಭಾರತೀಯರ ಸಹಿತ 22 ಪ್ರಯಾಣಿಕರನ್ನು ಹೊತ್ತು ಸಾಗಿದ್ದ ವಿಮಾನ ನಾಪತ್ತೆ!

ಇತ್ತೀಚಿನ ಸುದ್ದಿ

Exit mobile version