5:13 PM Thursday 16 - October 2025

ಲಿವರ್ ಸೋಂಕಿನಿಂದ ಬಳಲುತ್ತಿದ್ದ ಕಾಂಗ್ರೆಸ್ ಶಾಸಕ ನಿಧನ

20/01/2021

ಜೈಪುರ: ಲಿವರ್ ಸೋಂಕಿನಿಂದ ಬಳಲುತ್ತಿದ್ದ ರಾಜಸ್ಥಾನದ ಕಾಂಗ್ರೆಸ್ ಶಾಸಕ ಗಜೇಂದ್ರ ಸಿಂಗ್ ಶಕ್ತಾವತ್  ದೆಹಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಲಿವರ್ ಸೋಂಕಿನ ಹಿನ್ನೆಲೆಯಲ್ಲಿ ಅವರು ಕೆಲವು ಸಮಯಗಳಿಂದ ಅನಾರೋಗ್ಯಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ರಾಜಸ್ಥಾನದ ಉದಯಪುರದ ವಲ್ಲಭನಗರ ಕ್ಷೇತ್ರದಿಂದ ಗೆದ್ದಿದ್ದಂತ ಕಾಂಗ್ರೆಸ್ ಶಾಸಕ ಗಜೇಂದ್ರ ಸಿಂಗ್ ಶಕ್ತಾವತ್ ಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಬಳಿಕ ಅವರ ಲಿವರ್ ಗೂ ಸೋಂಕು ತಗುಲಿತ್ತು.

ಇತ್ತೀಚಿನ ಸುದ್ದಿ

Exit mobile version