ಹನೂರು ಕಾಂಗ್ರೆಸ್ ಶಾಸಕ ನರೇಂದ್ರಗೆ 17 ಕೋಟಿ ಆಸ್ತಿ: ಮಗನಿಗಿದೆ 1.7 ಲಕ್ಷ ಸಾಲ

ಚಾಮರಾಜನಗರ: ಹನೂರು ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್ ಶಾಸಕ ಆರ್.ನರೇಂದ್ರ ನಾಲ್ಕನೇ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಿನೇಷನ್ ನಲ್ಲಿ ಆಸ್ತಿ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದು ಸ್ವಯಾರ್ಜಿತವಾಗಿ 13,46,49,000 ಕೋಟಿ ಸಂಪಾದನೆ ಮಾಡಿದ್ದು, ಪಿತ್ರಾರ್ಜಿತವಾಗಿ 3.64 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದಾರೆ.
ಇನ್ನು, ಪತ್ನಿ ಸ್ವಯಾರ್ಜಿತವಾಗಿ 2.6 ಕೋಟಿ ಸಂಪಾದಿಸಿದ್ದು ಪುತ್ರ ನವನೀತ್ ಗೌಡ 3.8 ಕೋಟಿ ಆದಾಯ ಮಾಡಿದ್ದು 1.7 ಲಕ್ಷ ಸಾಲವನ್ನು ಪಡೆದಿದ್ದಾರೆ. ಶಾಸಕ ಆರ್.ನರೇಂದ್ರ 2 ಕಾರು, 1 ಟ್ರಾಕ್ಟರ್ ಹೊಂದಿದ್ದು ಪುತ್ರ 2 ಬೈಕ್, 1 ಕಾರನ್ನು ಹೊಂದಿದ್ದಾರೆ.
ಚಿನ್ನಾಭರಣ ವಿಚಾರ ಗಮನಿಸಿದರೇ ನರೇಂದ್ರ ಬಳಿ 16 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಇದ್ದರೇ ಪತ್ನಿ 580 ಗ್ರಾಂ ಚಿನ್ನ, 2.4 ಕೆಜಿ ಬೆಳ್ಳಿ ಹೊಂದಿದ್ದಾರೆ. ಮಗನ ಬಳಿಯೂ 20 ಗ್ರಾಂ ಚಿನ್ನ ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw