6:36 PM Thursday 16 - October 2025

ಕಾಂಗ್ರೆಸ್ ನಾಯಕನ ಪುತ್ರನ ವಿರುದ್ಧ ಅತ್ಯಾಚಾರದ ಆರೋಪ: ಮತ್ತೌಷಧಿ ನೀಡಿ ಯುವತಿಯ ಅತ್ಯಾಚಾರ

rohith joshi
09/05/2022

ನವದೆಹಲಿ: ಕಾಂಗ್ರೆಸ್ ಸಚಿವನ ಪುತ್ರನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು, ಯುವತಿಗೆ  ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಾಗಿದೆ.

ರಾಜಸ್ಥಾನದ ಕಾಂಗ್ರೆಸ್‌ ಸಚಿವ ಮಹೇಶ್‌ ಜೋಶಿ ಪುತ್ರ ರೋಹಿತ್‌ ಜೋಶಿ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕಳೆದ ವರ್ಷದ ಜೈಪುರ ಮತ್ತು ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ 23 ವರ್ಷದ ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಎಫ್‌ ಐಆರ್‌ ದಾಖಲಿಸಿಕೊಳ್ಳಲಾಗಿದೆ.

ರೋಹಿತ್‌ ಜೋಶಿ  ವಿರುದ್ಧ ಯುವತಿ ನೀಡಿರುವ ದೂರಿನನ್ವಯ ಅತ್ಯಾಚಾರ, ಮತ್ತು ಬರಿಸುವ ಪದಾರ್ಥ ನೀಡಿರುವುದು, ಗರ್ಭಪಾತ, ಮದುವೆಯಾಗಲು ಬಲವಂತ-ಅಪಹರಣ, ಲೈಂಗಿಕ ದೌರ್ಜನ್ಯ ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ.

ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ರೋಹಿತ್ ಜೋಶಿ, 2021ರ ಆರಂಭದಲ್ಲಿ ಜೈಪುರದ ಸವಾಯಿ ಮಾಧವ್ ಪುರದಲ್ಲಿ ಭೇಟಿಯಾಗಿದ್ದ. ಈ ವೇಳೆ ಹೊಟೇಲ್ ವೊಂದಕ್ಕೆ ಕರೆದೊಯ್ದು ನನಗೆ ಗೊತ್ತಿಲ್ಲದೇ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ನನಗೆ ಎಚ್ಚರವಾದಾಗ ನನ್ನ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದು ಬಂದಿತ್ತು. ಅತ್ಯಾಚಾರದ ವಿಡಿಯೋ ಮಾಡಿಕೊಂಡಿದ್ದ ಜೋಶಿ, ಈ ಬಗ್ಗೆ ಯಾರಿಗಾದರೂ ಹೇಳಿದರೆ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಸಿದ್ದ ಎಂದು ಯುವತಿ ದೂರಿದ್ದಾಳೆ.

ಅತ್ಯಾಚಾರದ ಪರಿಣಾಮ ನಾನು ಗರ್ಭ ಧರಿಸಿದ್ದು, ಈ ವೇಳೆ ಗರ್ಭಪಾತ ಮಾಡುವಂತೆ ಆತ ಮಾತ್ರಕೊಟ್ಟಿದ್ದ ಆದರೆ ನಾನು ಸೇವಿಸಿರಲಿಲ್ಲ ಎಂದು ಯುವತಿ ಹೇಳಿದ್ದಾಳೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸುಪ್ರಭಾತ ಅಭಿಯಾನ: ಖಡಕ್ ಎಚ್ಚರಿಕೆ ನೀಡಿದ ಸಚಿವ ಅರಗ ಜ್ಞಾನೇಂದ್ರ

ಡ್ರಾಮ ದಂಗಲ್: ಮೈಕ್ ತೆಗೆಸದಿದ್ದರೆ ಸರ್ಕಾರದ ವಿರುದ್ಧ ಕಾನೂನು ಹೋರಾಟ | ಮುತಾಲಿಕ್ ಘೋಷಣೆ

ಅಮಾನವೀಯ ಘಟನೆ: ಸ್ಮಶಾನ ಅಗೆದು ವಿಕಲಚೇತನ ಬಾಲಕಿಯ ಮೃತದೇಹದ ಮೇಲೆ  ಅತ್ಯಾಚಾರ

ಮಾನನಷ್ಟ ಮೊಕದ್ದಮೆ  ಹಾಕಲು ಡಿ.ಕೆ.ಶಿವಕುಮಾರ್ ಗೆ ಮಾನ ಇದೆಯೇ? | ಯತ್ನಾಳ್ ಪ್ರಶ್ನೆ

ಮದುವೆಯ ಸುದ್ದಿ ಹರಡಿದವರಿಗೆ ಕಾಲಿನ ಫೋಟೋ ಹಾಕಿ ತಿರುಗೇಟು ನೀಡಿದ ಸಾಯಿ ಪಲ್ಲವಿ

ಇತ್ತೀಚಿನ ಸುದ್ದಿ

Exit mobile version