‘ಗಾಂಡು’ ಎಂದು ಕರೆದ ನರೇಂದ್ರ ಸ್ವಾಮಿಯನ್ನು ಸೀಡ್ ಲೆಸ್ ಎಂದು ಕರೆದ ಸಿ.ಟಿ.ರವಿ!

ಚಿಕ್ಕಮಗಳೂರು: ಸಿ.ಟಿ. ರವಿ ಅಯೋಗ್ಯ, ಗಾಂಡು ಎಂದು ನರೇಂದ್ರ ಸ್ವಾಮಿ ನೀಡಿರುವ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದರು.
ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಗಮನ ಸೆಳೆಯುತ್ತಿದ್ದಾರೆ ಹೀಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರು ಅದೇ ರೀತಿ ಇರ್ತಾರೆ, ಅವರು ಮಾತ್ರ ಅಂತಹ ಪದ ಬಳಕೆ ಮಾಡ್ತಾರೆ, ಅವರ ಮಾತಿನ ದಾಟಿ ನೋಡಿದ್ರೆ Now he is Seedless ಆ ಕಾರಣಕ್ಕೆ ಅವರ ಬಾಯಿಂದ ಅಂತಹಾ ಮಾತು ಬಂದಿದೆ ಎಂದ ಸಿ.ಟಿ.ರವಿ, ಸೀಡ್ ಲೆಸ್ ಅಂದ್ರೆ ಗೊತ್ತಲ್ಲಾ… ಅದರಲ್ಲಿ ಬೀಜ ಇರಲ್ಲ… ಹುಟ್ಟಲ್ಲ ರಾಜಕೀಯವಾಗಿ ಈಗ ಅವರು ಸೀಡ್ ಲೆಸ್ ಆಗಿದ್ದಾರೆ. ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ರಾಜ್ಯ ಸಭೆಗೆ ಸೋನಿಯಾ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲಿಂದಾದ್ರು ನಿಂತ್ಕಂಡ್ಲಿ, ಸಿಎಂ ಹೇಳಿದ್ರು 20 ಸ್ಥಾನ ಗೆಲ್ತೀವಿ ಅಂತ. 20 ಸ್ಥಾನ ಇಡೀ ದೇಶದಲ್ಲಾ ಅನ್ನೋದೇ ನನ್ನ ಪ್ರಶ್ನೆ. ಇವತ್ತಿನ ಸ್ಥಿತಿಗೆ ಇಡೀ ದೇಶದಲ್ಲಿ 20 ಸ್ಥಾನ ಗೆಲ್ಲೋದು ಕಷ್ಟ ಎಂದು ವ್ಯಂಗ್ಯವಾಡಿದರು.
ರಾವಣನ ಪಕ್ಷದಲ್ಲಿದ್ರು ಯಾರ್ಯಾರು ವಿಭೀಷಣರಿದ್ದಿರೋ ಎಲ್ಲರೂ ಬನ್ನಿ, ಕೌರವನ ಪಕ್ಷದಲ್ಲೇ ಇದ್ದ ದುರ್ಯೋಧನನ ಸಹೋದರ ಯುಯೂತ್ಸು ಕುರುಕ್ಷೇತ್ರದ ಸಮಯದಲ್ಲಿ ಧರ್ಮದ ಪರ ಇರೋರು ಬನ್ನಿ ಎಂದು ಕರೆ ನೀಡಿದಾಗ ಆತ ಪಾಂಡವರ ಪರ ಬಂದ. ದೇಶಬೇಕು ಅನ್ನೋ ವಿಭೀಷಣರು ಬಿಜೆಪಿ ಬನ್ನಿ. ಮೋದಿ ಪ್ರಧಾನಿಯಾಗಬೇಕು, ದೇಶ ಉಳೀಬೇಕು ಅನ್ನೋರು ಬನ್ನಿ ಎಂದು ಕರೆ ನೀಡಿದರು.
ಅಯೋಧ್ಯೆಯಂತೆ ಕಾಶಿಯಲ್ಲಿ ಭವ್ಯ ಮಂದಿರ ಕಟ್ತೀವಿ:
ಅಯೋಧ್ಯೆಯಂತೆ ಕಾಶಿಯಲ್ಲಿ ಕೂಡ ಭವ್ಯ ಮಂದಿರ ಕಟ್ಟೇ ಕಟ್ತೀವಿ, ಈಗ ನಾವು ಹಿಂದೂ ಅನ್ನೋ ಸಿದ್ದರಾಮಯ್ಯನವರ ನಿಲುವೇನು? ಸಿದ್ದರಾಮಯ್ಯ ಆಗ ನಾನು ಹಿಂದು ಅಂತ ನಾಟ್ಕ ಮಾಡೋದು ಬೇಡ, ಈಗ ತಮ್ಮ ನಿಲುವನ್ನ ಸ್ಪಷ್ಟಪಡಿಸಲಿ, ಅತಿಕ್ರಮಿಸಿ ಮಸೀದಿ ಕಟ್ಟಿದ್ದಾರೆ ಅಲ್ಲಿ ನಮಾಜ್ ಮಾಡುದ್ರೆ ಹರಾಮ್ ಎಂದು ಒಳ್ಳೆ ಮುಸ್ಲೀಮರು ಹೇಳ್ತಾರೆ. ಆ ಹರಾಮಿ ಕೆಲಸಕ್ಕೆ ಹೋಗೋರೆಲ್ಲಾ ಹರಾಮಿಗಳೇ… ಇದು ನಮ್ಮ ನಿಲುವು, ಆ ಜಾಗಗಳನ್ನ ಬಿಟ್ಟುಕೊಡಬೇಕು. ಈ ಬಗ್ಗೆ ಕಾಂಗ್ರೆಸ್, ಸಿದ್ದರಾಮಯ್ಯ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.
ಇಡೀ ದೇಶ ಜೈ ಶ್ರೀರಾಮ್ ಅಂದಮೇಲೆ ನೀವು ಜೈ ಶ್ರೀರಾಮ ಎಂದ್ರಿ. ಆಗ ಮತ್ತೆ ನಾಟಕ ಮಾಡೋದು ಬೇಡ, ಈಗ ನಿಮ್ಮ ನಿಲುವು ತಿಳಿಸಿ. ಜ್ಞಾನವ್ಯಾಪಿ ಮಸೀದಿಯಲ್ಲಿ ದೇವಾಲಯ ಇತ್ತು ಅನ್ನೋದು ಸ್ಪಷ್ಟ, 1666 ಹಾಸುಪಾಸಿನಲ್ಲಿ ಔರಂಗಜೇಬ್ ದೇವಾಲಯದ ಅವಶೇಷ ಬಳಸಿಕೊಂಡೇ ದೇವಾಲಯ ಕಟ್ಡಿದ್ದ ಅವನೇ ಬರೆದುಕೊಂಡಿರೋ ಅಲಂಗಿರ್ ನಾಮ ಎಂಬ ದಾಖಲೆ ಹೇಳುತ್ತೆ. ಮುಸ್ಲಿಮರು ಪಾಪಿ ಔರಂಗಜೇಬ್ ಜೊತೆ ಗುರುತಿಸಿಕೊಳ್ಳಬಾರದು. ವಿವಾದಿತ ಜಾಗದಲ್ಲಿ ನಮಾಜ್ ಮಾಡುದ್ರೆ ಹರಾಮ್ ಆಗುತ್ತೆ ಎಂದು ಮುಸ್ಲಿಮರೇ ಹೇಳಿಕೊಂಡಿದ್ದಾರೆ. ನಿಮಗೆ ಅದು ಹರಾಮ್, ನಮಗೆ ಅದು ಪವಿತ್ರ ಬಿಟ್ಟುಕೊಡಿ ಎಂದು ಸಿ.ಟಿ.ರವಿ ಹೇಳಿಕೆ ನೀಡಿದರು.