11:04 AM Saturday 23 - August 2025

ದಂಪತಿಯನ್ನು ಅಡ್ಡಗಟ್ಟಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಿನ್ನಾಭರಣ ದೋಚಿದ ದರೋಡೆಕೋರರು

guntur
09/09/2021

ಗುಂಟೂರು: ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ದಂಪತಿಯ ಮೇಲೆ ದರೋಡೆಕೋರರ ಗುಂಪೊಂದು ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ಮಾಡಿರುವುದೇ ಅಲ್ಲದೇ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ  ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ಬೈಕ್ ನಲ್ಲಿ ವಾಪಸ್ ಆಗುತ್ತಿದ್ದ ವೇಳೆ, ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಮೇಡಿಕೊಂಡೂರು ವಲಯದ ಪಲಡುಗು ಅಡ್ಡ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ದರೋಡೆಕೋರರು ದಂಪತಿಯನ್ನು ತಡೆದಿದ್ದಾರೆ.

ಚಾಕು ತೋರಿಸಿದ ಬಳಿಕ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದರೋಡೆಕೋರರು, ಬಳಿಕ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಿದ್ದಾರೆ.  ಬಳಿಕ ಮಹಿಳೆಯ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆ ನಡೆದಂದೇ ಸಂತ್ರಸ್ತ ಮಹಿಳೆ ಸಮೀಪದ ಸತ್ತನ್ನಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ತನಿಖೆ ಕೈಗೆತ್ತಿಕೊಂಡ ಪೊಲೀಸರು 8 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ. ಬಂಧಿತರೆಲ್ಲರೂ, ಪಾಲದುಗು ಬಳಿ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರೆಲ್ಲರೂ ಒಡಿಶಾ ಮತ್ತು ವಿಜಯನಗರದ ಯುವಕರು ಎಂದು ಗುರುತಿಸಲಾಗಿದೆ.

ಇನ್ನಷ್ಟು ಸುದ್ದಿಗಳು…

ಚೌತಿಗೂ ಮೊದಲೇ ಬಿಬಿಎಂಪಿ ಕಚೇರಿ ಆವರಣಕ್ಕೆ ಬಂದ ಗಣಪ! |  ಗಣೇಶೋತ್ಸವಕ್ಕೆ ನಿರ್ಬಂಧದ ವಿರುದ್ಧ ಪ್ರತಿಭಟನೆ

ಬಸ್ ನಿಂದ ಇಳಿದು ರಸ್ತೆ ದಾಟುವಷ್ಟರಲ್ಲೇ ತಾಯಿ, ಮಗಳಿಗೆ ಡಿಕ್ಕಿ ಹೊಡೆದಿತ್ತು ಕಾರು! | ಕೆಲವೇ ಕ್ಷಣಗಳಲ್ಲಿ ಹಾರಿ ಹೋಗಿತ್ತು ಪ್ರಾಣ!

ಜಾತಿ ತಾರತಮ್ಯ ನಿರ್ಮೂಲನೆ ಮಾಡುವ ಗ್ರಾಮಕ್ಕೆ 10 ಲಕ್ಷ ರೂಪಾಯಿ ಬಹುಮಾನ!

ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ

ರವಿಶಂಕರ್ ಗುರೂಜಿ ಆಶ್ರಮದವರಿಗೇ ಮಂಕುಬೂದಿ ಎರಚಿ ವಂಚಿಸಿದ ನಕಲಿ ಐಎಎಸ್ ಅಧಿಕಾರಿ!

“ಕಾರ್ ನನ್ನದು, ಯಾಕ್ರಿ ಟೋಯಿಂಗ್ ಮಾಡ್ತಿದ್ದೀರಿ” | ಟ್ರಾಫಿಕ್ ಪೊಲೀಸರನ್ನು ಗದರಿದ ಮಹಿಳೆ

ಹೆದ್ದಾರಿಯ ಉದ್ದಕ್ಕೂ ಕಿಲೋ ಮೀಟರ್ ಗಟ್ಟಲೆ ಕಾಂಡಮ್ ಪತ್ತೆ | ಅಷ್ಟಕ್ಕೂ ನಡೆದದ್ದೇನು?

ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ

ಇತ್ತೀಚಿನ ಸುದ್ದಿ

Exit mobile version