ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯನ್ನು ರಸ್ತೆಯಲ್ಲೇ ಕೊಚ್ಚಿ ಕೊಂದ ಸೋದರ ಸಂಬಂಧಿ..!

28/07/2023

ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿ ಶುಕ್ರವಾರ ಕಾಲೇಜು ವಿದ್ಯಾರ್ಥಿನಿಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಲಾಗಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೃತ ಯುವತಿಯನ್ನು ನರ್ಗಿಸ್ ಎಂದು ಗುರುತಿಸಲಾಗಿದೆ. ಈಕೆ ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು.

ಪೊಲೀಸರ ಪ್ರಕಾರ, ಸ್ವಂತ ಸೋದರಸಂಬಂಧಿ ಮದುವೆಯಾಗುವ ಪ್ರಸ್ತಾಪ ಇಟ್ಟಾಗ ಈಕೆ ನಿರಾಕರಿಸಿದ್ದಕ್ಕೆ ದೆಹಲಿಯ ಅರಬಿಂದೋ ಕಾಲೇಜು ಬಳಿಯ ಮಾಳವೀಯ ನಗರ ಉದ್ಯಾನವನದಲ್ಲಿ ಕೊಚ್ಚಿ ಕೊಂದಿ‍ದ್ದಾನೆ. ಕೊಲೆಗೆ ಸಂಬಂಧಿಸಿದಂತೆ ಆಕೆಯ ಸೋದರಸಂಬಂಧಿ ಇರ್ಫಾನ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಇರ್ಫಾನ್ ಚೆನ್ನಾಗಿ ಹಣ ಸಂಪಾದಿಸದ ಕಾರಣ ಯುವತಿಯ ಕುಟುಂಬವು ಆತನನ್ನು ಮದುವೆಯಾಗಲು ನಿರಾಕರಿಸಿತ್ತು. ಈತ ಆಹಾರ ವಿತರಣಾ ಅಪ್ಲಿಕೇಶನ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ.

ಯುವತಿ ನರ್ಗಿಸ್ ತನ್ನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ನಂತರ ಇರ್ಫಾನ್ ಅಸಮಾಧಾನಗೊಂಡಿದ್ದ. ನರ್ಗಿಸ್ ಮಾಳವೀಯ ನಗರದಲ್ಲಿ ಕೋಚಿಂಗ್ ತರಗತಿಗಳಿಗೆ ಹೋಗುತ್ತಿದ್ದಳು. ಅವಳು ಕೊಲೆಯಾದ ಪಾರ್ಕ್ ಮೂಲಕ ದಿನಾಲೂ ಹಾದುಹೋಗುತ್ತಿದ್ದಳು ಎಂದು ಆರೋಪಿಗೆ ತಿಳಿದಿತ್ತು.

ಇರ್ಫಾನ್ ಪಾರ್ಕ್ ಬಳಿ ಹೋಗಿ ನರ್ಗಿಸ್ ಜೊತೆಗೆ ಮಾತನಾಡಲು ಇದೆ ಎಂದು ಹೇಳಿದ್ದಾನೆ. ಆಗ ಅವಳು ಮಾತನಾಡಲು ನಿರಾಕರಿಸಿದಾಗ, ಅವನು ಕಬ್ಬಿಣದ ರಾಡ್ ನಿಂದ ಅವಳ ಮೇಲೆ ಹಲ್ಲೆ ಮಾಡಿದ್ದಾನೆ. ತನಿಖೆಯ ಸಮಯದಲ್ಲಿ ಇರ್ಫಾನ್ ಮೂರು ದಿನಗಳ ಮುಂಚೆ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version